ಕಾಸ್ಗಂಜ್ ನ ಪ್ರತಿ ಮನೆಯಲ್ಲಿ ಎಕೆ-47 ಇದೆ: ಬಿಜೆಪಿ ಶಾಸಕ ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ

Update: 2018-02-01 10:27 GMT

ಲಕ್ನೋ, ಫೆ.1: ಕಾಸ್ಗಂಜ್ ನ ಪ್ರತಿಯೊಂದು ಮನೆಯಲ್ಲೂ ಎಕೆ-47 ಇದೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲೂ ಅಧಿಕಾರಿಗಳು ತಪಾಸಣೆ ನಡೆಸಬೇಕು ಎಂದು ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆದಿತ್ಯನಾಥ್ ರನ್ನು ಒತ್ತಾಯಿಸಿದ್ದಾರೆ.

“ಭಾರತದಲ್ಲೇ ವಾಸಿಸುವ ನಿಮಗೆ ‘ಪಾಕಿಸ್ತಾನ್ ಝಿಂದಾಬಾದ್’ ಎಂದು ಹೇಳಲು ತಿರಂಗಾ ಪ್ರಚೋದಿಸುತ್ತದೆ ಎಂದಾದರೆ ದೇಶವಿರೋಧಿ ಚಟುವಟಿಕೆಗಳು ಹೆಚ್ಚಿದೆ ಎಂದರ್ಥ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಆದಿತ್ಯನಾಥ್ ಕ್ರಮ ಕೈಗೊಳ್ಳಬೇಕು. ಕಾಸ್ಗಂಜ್ ನ ಎಲ್ಲಾ ಮನೆಗಳನ್ನು ಪರಿಶೀಲಿಸಬೇಕು. ಎಲ್ಲಾ ಮನೆಗಳಲ್ಲೂ ಎಕೆ 47 ಇದೆ” ಎಂದವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News