ಹನೂರು: ಪಂಚಾಕ್ಷರಿ ಅಭಿಮಾನಿ ಬಳಗದ ವತಿಯಿಂದ ಗೂಡ್ಸ್ ಆಟೋ ವಿತರಣೆ

Update: 2018-02-02 16:06 GMT

ಹನೂರು,ಫೆ.02 : ಹನೂರು ಸಮೀಪದ ಬೂದಬಾಳು ಗ್ರಾಮದಲ್ಲಿ ಎಂ ಪಂಚಾಕ್ಷರಿ ಅಭಿಮಾನಿ ಬಳಗದ ವತಿಯಿಂದ ಸುಮಾರು 10 ಕ್ಕೂ ಹೆಚ್ಚು ಗೂಡ್ಸ್ ಆಟೋ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ದೇಶದಲ್ಲಿ ನಿರುದ್ಯೋಗ ಸಮಸ್ಯೆಗಳನ್ನು ನಿವಾರಣೆಮಾಡುವಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೆರಡೂ ಸಹ ವಿಫಲವಾಗಿದೆ ಎಂದು ನಾಗೇಂದ್ರ ಆರೋಪಿಸಿದರು.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯಿಂದಾಗಿ, ಯುವಕರು ಸ್ವಯಂ ಉದ್ಯೋಗದತ್ತ ಮುಖ ಮಾಡುವುದು ಅನಿವಾರ್ಯವಾಗಿದೆ. ಆರ್ಥಿಕವಾಗಿ ಸ್ವಂತ ಬಂಡವಾಳ ಒದಗಿಸಲು ಸಾದ್ಯವಾಗದೆ ಆರ್ಥಿಕವಾಗಿ ಹಿಂದುಳಿದ ಯುವಕರನ್ನು ಗುರುತಿಸಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎಂ.ಪಂಚಾಕ್ಷರಿ ಬಳಗದ ವತಿಯಿಂದ ಸತತವಾಗಿ ಆಟೋ ವಿತರಣೆ ಮಾಡುತ್ತಿರುವುದು ಮತ್ತು ನಿರುದ್ಯೋಗಗಳ ಕುಟಂಬಗಳ ನೆರವಿಗೆ ನಿಂತಿರುವುದು ತುಂಬಾ ಸಂತಸದ ವಿಚಾರ ಎಂದರು.

ನಿರುದ್ಯೋಗ ಸಮಸ್ಯೆಯಿಂದ ದೇಶದ ಅಬಿವೃದ್ದಿ ಕುಂಠಿತ: ಭಾರತ ಪ್ರಪಂಚದಲ್ಲಿಯೇ ಶ್ರಿಮಂತಿಕೆಯಲ್ಲಿ ಏಳನೇ ಸ್ಥಾನದಲ್ಲಿದೆ. ಆದರೆ ಮಾನವ ಅಭಿವೃದ್ದಿಯಲ್ಲಿ 137ನೇ ಸ್ಥಾನದಲ್ಲಿ ಇದೆ. ಇದು ದುರಂತವೇ ಸರಿ. ದೇಶದಲ್ಲಿ ಶೇ.60ಕ್ಕೂ ಹೆಚ್ಚು ಯುವಕರಿದ್ದು, ಅದರಲ್ಲಿ ಶೇ.55ಕ್ಕೂ ಹೆಚ್ಚು ಯುವಕರು ವಿವಿಧ ಪದವಿಗಳನ್ನು ಪಡೆದುಕೂಂಡರೂ ನಿರುದ್ಯೋಗಿಗಳಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ದೇಶದಲ್ಲಿ ಎಲ್ಲಾ ಕಾಲೇಜುಗಳು ನಿರುದ್ಯೋಗಿಗಳನ್ನು ಉತ್ಪತ್ತಿ ಮಾಡುವಂತಹ ಕಾರ್ಖಾನೆಯಾಗಿ ಪರಿಣಮಿಸಿದೆ. ನಮ್ಮ ದಿನ ನಿತ್ಯದ ಜೀವನದಲ್ಲಿ ವೈಯಕ್ತಿಕ ಸಮಸ್ಯೆಯ ಜೊತೆಗೆ ಪ್ರತಿಯೊಂದು ಸಮಸ್ಯೆಯ ಮೂಲವಾದಂತಹ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮನ್ನು ಆಳುವಂತಹ ಸರ್ಕಾರಗಳು ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು 

ಇದೇ ಸಂದರ್ಭದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಬಿಎಸ್‍ಪಿ ಮುಖಂಡ ಪಂಚಾಕ್ಷರಿ ಅಧ್ಯಕ್ಷರಾದ ಶಾಗ್ಯಮಹೇಶ್, ಸಂಯೋಜಕರಾದ ಸಿದ್ದರಾಜು, ಶಾಗ್ಯ ನಂದೀಶ್, ಹನುಮಂತು, ಬಜಾಜ್ ಕಂಪನಿ ಡೀಲರ್ಸ್ ಪರಮೇಶ್ ಪ್ರವೀಣ್‍ಕುಮಾರ್ ಇನ್ನಿತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News