ಆರೋಗ್ಯ ಸೂಚಿಯಲ್ಲಿ ಅಗ್ರಸ್ಥಾನ ಗಳಿಸಿದ ರಾಜ್ಯ ಯಾವುದು ಗೊತ್ತಾ?

Update: 2018-02-09 13:46 GMT

ಹೊಸದಿಲ್ಲಿ,ಫೆ.9: ನೀತಿ ಆಯೋಗವು ಸಿದ್ಧಪಡಿಸಿರುವ ಆರೋಗ್ಯ ಸೂಚಿ ವರದಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿದೆ. ಉತ್ತರ ಪ್ರದೇಶವು ಇತ್ತೀಚಿಗೆ ಸುಧಾರಣೆಯನ್ನು ತೋರಿಸಿದೆಯಾದರೂ ದೊಡ್ಡ ರಾಜ್ಯಗಳ ಪೈಕಿ ಕೊನೆಯ ಸ್ಥಾನದಲ್ಲಿದೆ.

ದೊಡ್ಡ ರಾಜ್ಯಗಳ ಆರೋಗ್ಯ ಸೂಚಿಯಲ್ಲಿ ಕೇರಳದ ನಂತರದ ಸ್ಥಾನಗಳಲ್ಲಿ ಪಂಜಾಬ್,ತಮಿಳುನಾಡು ಮತ್ತು ಗುಜರಾತ್‌ಗಳಿವೆ. ಕಳಪೆ ಸಾಧನೆ ಪ್ರದರ್ಶಿಸಿರುವ ರಾಜ್ಯಗಳ ಸಾಲಿನಲ್ಲಿ ಉತ್ತರ ಪ್ರದೇಶದ ಜೊತೆಗೆ ರಾಜಸ್ಥಾನ,ಬಿಹಾರ ಮತ್ತು ಒಡಿಶಾಗಳೂ ಸೇರಿವೆ.

ದೊಡ್ಡ ರಾಜ್ಯಗಳ ಪೈಕಿ ವಾರ್ಷಿಕ ವೃದ್ಧಿಶೀಲ ಸಾಧನೆಗೆ ಸಂಬಂಧಿಸಿದಂತೆ ಜಾರ್ಖಂಡ್, ಜಮ್ಮು-ಕಾಶ್ಮೀರ ಮತ್ತು ಉತ್ತರ ಪ್ರದೇಶ ಮೊದಲ ಮೂರು ಅಗ್ರಸ್ಥಾನಗಳನ್ನು ಪಡೆದುಕೊಂಡಿವೆ.

ಆರೋಗ್ಯ ಸೂಚಿಯಲ್ಲಿ ಸಣ್ಣ ರಾಜ್ಯಗಳ ಪೈಕಿ ಮಿಝೊರಾಂ ಮೊದಲ ಸ್ಥಾನದಲ್ಲಿದ್ದರೆ,ಮಣಿಪುರ ಮತ್ತು ಗೋವಾ ನಂತರದ ಸ್ಥಾನಗಳಲ್ಲಿವೆ.

ಶುಕ್ರವಾರ ಆರೋಗ್ಯ ಸೂಚಿ ವರದಿಯನ್ನು ಬಿಡುಗಡೆಗೊಳಿಸಿದ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು,ಆರೋಗ್ಯ ಸೂಚಿಯು ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟವಾದಕ್ಕೆ ಬಲ ನೀಡುವ ಮತ್ತು ಆರೋಗ್ಯ ಫಲಿತಾಂಶಗಳನ್ನು ಸಾಧಿಸುವಲ್ಲಿ ಹೆಚ್ಚಿನ ವೇಗ ನೀಡುತ್ತದೆ ಎನ್ನುವುದು ಆಯೋಗದ ನಂಬಿಕೆಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News