ಮೋದಿಗೆ ಯಾರಾದರೂ ‘ಐ ಲವ್ ಯೂ' ಹೇಳಿದ್ದಾರೆಯೇ? : ವೆಲೆಂಟೈನ್ಸ್ ದಿನ ಮೇವಾನಿ ಪ್ರಶ್ನೆ

Update: 2018-02-14 12:59 GMT

ಹೊಸದಿಲ್ಲಿ,ಫೆ.14 :  ಯಾರಾದರೂ ಪ್ರಧಾನಿ ಮೋದಿಗೆ 'ಐ ಲವ್ ಯೂ' ಹೇಳಿದ್ದಾರೆಯೇ, ಈ ಬಗ್ಗೆ ನನಗೆ ಸಂಶಯವಿದೆ, ಎಂದು ವೆಲಂಟೈನ್ಸ್ ದಿನದಂದು ಹಿಂದುಳಿದ ವರ್ಗಗಳ ನಾಯಕ ಹಾಗೂ  ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿಕೊಂಡಿದ್ದಾರೆ.

ಮಲಯಾಳಂ ಉದಯೋನ್ಮುಖ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ವೈರಲ್ ಆಗಿರುವ 'ಮಾಣಿಕ್ಯ ಮಲರಾಯ ಪೂವಿ' ಹಾಡಿನ ಕಣ್ಣು ಮಿಟುಕಿಸುವ ದೃಶ್ಯದ ವೀಡಿಯೋವೊಂದನ್ನೂ  ಉಲ್ಲೇಖಿಸಿದ ಮೇವಾನಿ, “ಪ್ರೇಮಿಗಳ ದಿನಾಚರಣೆಯನ್ನು ನೈತಿಕ ಕಾರಣಗಳಿಗಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಆರೆಸ್ಸೆಸ್ಸಿಗೆ ಈ ಹಾಡು  ತಕ್ಕ ಪ್ರತ್ಯುತ್ತರವಾಗಿದೆ'' ಎಂದು ತಿಳಿಸಿದ್ದಾರೆ.

ಆ ವೀಡಿಯೋವನ್ನೂ ಶೇರ್ ಮಾಡಿರುವ ಮೆವಾನಿ ‘ಎಂಜಾಯ್ ದಿಸ್ ಬ್ಯೂಟಿಫುಲ್ ವೀಡಿಯೋ' ಎಂದು ಬರೆದಿದ್ದಾರೆ. “ಈ ವೀಡಿಯೋದ ಮೂಲಕ ಭಾರತೀಯರು ತಾವು ದ್ವೇಷಕ್ಕಿಂತ ಪ್ರೀತಿಯನ್ನು ಹೆಚ್ಚು ಇಷ್ಟ ಪಡುತ್ತೇವೆ ಎಂಬುದನ್ನು ಸಾಬೀತು ಪಡಿಸಿದ್ದಾರೆ,'' ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News