ಶೌಚಾಲಯಗಳಲ್ಲಿ ಕ್ಯಾಮರಗಳನ್ನು ಇಟ್ಟ ಭಾರತ ಮೂಲದ ಶಿಕ್ಷಕನಿಗೆ ಜೈಲು

Update: 2018-02-15 16:55 GMT

ಲಂಡನ್, ಫೆ. 15: ತಾನು ಕೆಲಸ ಮಾಡಿದ ಇಂಗ್ಲೆಂಡ್‌ನ 3 ಶಾಲೆಗಳ ಶೌಚಾಲಯಗಳಲ್ಲಿ ಗುಪ್ತ ಕ್ಯಾಮರಗಳನ್ನು ಇಟ್ಟ ಪ್ರಕರಣದಲ್ಲಿ, ಭಾರತ ಮೂಲದ ವಿಜ್ಞಾನ ಶಿಕ್ಷಕರೊಬ್ಬರಿಗೆ ಇಲ್ಲಿನ ನ್ಯಾಯಾಲಯವೊಂದು 4 ವರ್ಷಗಳಿಗಿಂತಲೂ ಅಧಿಕ ಜೈಲು ವಾಸದ ಶಿಕ್ಷೆಯನ್ನು ವಿಧಿಸಿದೆ.

ಮಹಿಳೆಯರು ಮತ್ತು ಬಾಲಕಿಯರು ಬಳಸುವ ವಿಶ್ರಾಂತಿ ಕೋಣೆಗಳು ಮತ್ತು ಶೌಚಾಲಯಗಳಲ್ಲಿ ರಾಹುಲ್ ಒಡೇದರ ಗುಪ್ತ ಕ್ಯಾಮರಗಳನ್ನು ಇಟ್ಟಿದ್ದನು ಎಂದು ಗ್ಲೌಸೆಸ್ಟರ್ ಕ್ರೌನ್ ನ್ಯಾಯಾಲಯಕ್ಕೆ ತಿಳಿಸಲಾಯಿತು.

ತನ್ನ ವಿರುದ್ಧದ ಆರೋಪಗಳನ್ನು 46 ವರ್ಷದ ಶಿಕ್ಷಕ ಒಪ್ಪಿಕೊಂಡಿದ್ದಾನೆ.

ಆತ ತನ್ನ ಕೃತ್ಯಗಳನ್ನು 2009 ಮತ್ತು 2017ರ ನಡುವಿನ ಅವಧಿಯಲ್ಲಿ ನಡೆಸಿದ್ದಾನೆ.

‘‘ಆತ ಈ ಕ್ಯಾಮರಗಳನ್ನು ಮಧ್ಯಾಹ್ನದ ಊಟದ ವೇಳೆಯಲ್ಲಿ ಅಳವಡಿಸುತ್ತಿದ್ದನು ಹಾಗೂ ಬಳಿಕ ತೆಗೆಯುತ್ತಿದ್ದನು’’ ಎಂದು ಪ್ರಾಸಿಕ್ಯೂಟರ್ ಅಂಜಲಿ ಗೋಹ್ಲಿ ನ್ಯಾಯಾಲಯಕ್ಕೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News