ಹಾಕಿ ವಿಶ್ವಕಪ್‌ಗೆ ಪಾಕಿಸ್ತಾನಕ್ಕೆ ಆಹ್ವಾನ

Update: 2018-02-16 19:13 GMT

ಹೊಸದಿಲ್ಲಿ, ಫೆ.16: ಭಾರತದಲ್ಲಿ ನ.28 ರಿಂದ ಡಿ.16ರ ತನಕ ನಡೆಯಲಿರುವ 2018ರ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಆಹ್ವಾನ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ಅಧ್ಯಕ್ಷ ನರೇಂದ್ರ ಬಾತ್ರಾ ಹೇಳಿದ್ದಾರೆ.

 ಉಭಯ ದೇಶಗಳ ನಡುವೆ ರಾಜಕೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಪ್ರವಾಸ ಕೈಗೊಳ್ಳಲು ಅವಕಾಶ ನೀಡಲಾಗುವುದಿಲ್ಲ ಎಂಬ ಊಹಾಪೋಹವಿತ್ತು. ಈ ವರ್ಷದ ವಿಶ್ವಕಪ್ ಭುವನೇಶ್ವರದಲ್ಲಿ ಎಫ್‌ಐಎಚ್ ಆಶ್ರಯದಲ್ಲಿ ನಡೆಯಲಿದ್ದು, ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಆಹ್ವಾನ ನೀಡಲಾಗುವುದು. ಈ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಅಗತ್ಯದ ಅನುಮತಿ ಪಡೆಯಲಾಗುವುದು. ಕೆಲವೊಂದು ನೀತಿ ನಿಯಮಗಳಿದ್ದು, ಟೂರ್ನಿ ಆರಂಭವಾಗುವ 60 ದಿನಗಳ ಮೊದಲು ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡ ವೀಸಾಕ್ಕೆ ಅರ್ಜಿ ಸಲ್ಲಿಸಬೇಕು.ಇತರ ನಿಯಮವನ್ನು ಪಾಕ್ ಪಾಲಿಸಬೇಕು’’ ಎಂದು ಬಾತ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News