ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಯನ್ನು ಎಲ್ಲರೆದುರು ನಿಂದಿಸಿದ ಮೇನಕಾ ಗಾಂಧಿ

Update: 2018-02-17 10:48 GMT

ಹೊಸದಿಲ್ಲಿ,ಫೆ.17 :  ಉತ್ತರ ಪ್ರದೇಶದ ಬಹೇರಿಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಯೊಬ್ಬರನ್ನು ನಿಂದಿಸಿ ಹಂಗಿಸಿದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಭೆಯಲ್ಲಿ ಹಾಜರಿದ್ದ ಜನರಿಂದ ಅಧಿಕಾರಿ ಲಂಚ ಪಡೆದ ಆರೋಪ ಕೇಳಿ ಬಂದ ಕೂಡಲೇ ಆ ಅಧಿಕಾರಿಯ ವಿರುದ್ಧ ಸಚಿವೆ ಕಿಡಿ ಕಾರುವ ದೃಶ್ಯ ಈ 35 ಸೆಕೆಂಡ್ ಅವಧಿಯ ವೀಡಿಯೋದಲ್ಲಿದೆ.

“ಮನುಷ್ಯರು ಹಣದಿಂದ ಬದುಕುವುದಿಲ್ಲ, ಗೌರವದಿಂದ ಬದುಕುತ್ತಾರೆ. ಆದರೆ ನೀವು ಬ್ಯಾಸ್ಟರ್ಡ್ ನಂತೆ ದಪ್ಪಗಿದ್ದೀರಾ, ಅದು ಸಾಲದೆಂಬಂತೆ ಲಂಚ ಪಡೆಯುವ ಧೈರ್ಯವೂ ನಿಮಗಿದೆ,” ಎಂದು ಮೇನಕಾ ಎಲ್ಲರೆದುರು ಅಧಿಕಾರಿಯನ್ನು ಹೀಗಳೆದಿದ್ದಾರೆ.

ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆಯ ಆರೋಪ ಹೊತ್ತ ನಂತರ ಉತ್ತಮ ಅನುಭವವಾಗುತ್ತಿದೆಯೇ ಎಂದೂ ಸಚಿವೆ ಆ ಅಧಿಕಾರಿಯನ್ನು ಕೇಳಿದ್ದಾರೆ. ಭ್ರಷ್ಟ ಅಧಿಕಾರಿಯೊಬ್ಬರನ್ನು ತರಾಟೆಗೆ  ತೆಗೆದುಕೊಂಡಿದ್ದಕ್ಕಾಗಿ ಸಚಿವೆ ಸಾಮಾಜಿಕ ಜಾಲತಾಣದಲ್ಲಿ ಹಲವರ ಬೆಂಬಲ ಪಡೆದಿದ್ದಾರೆ. ಸಚಿವೆ ಮಾಡಿದ್ದರಲ್ಲಿ ತಪ್ಪೇನಿಲ್ಲ, ಇಂತಹ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News