ಶುಐಬ್ ಅಖ್ತರ್ ಪಿಸಿಬಿ ರಾಯಭಾರಿ

Update: 2018-02-18 18:50 GMT

ಕರಾಚಿ, ಫೆ.18: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶುಐಬ್ ಅಖ್ತರ್ ಪಿಸಿಬಿಯ ನೂತನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಅಧ್ಯಕ್ಷ ನಜಮ್ ಸೇಥಿ ಹೇಳಿದ್ದಾರೆ.

‘‘ಕ್ರಿಕೆಟ್‌ಗೆ ಸಂಬಂಧಿಸಿದ ವ್ಯವಹಾರದಲ್ಲಿ ಪಿಸಿಬಿ ಅಧ್ಯಕ್ಷರಿಗೆ ಸಲಹೆ ನೀಡಲಿರುವ ಅಖ್ತರ್ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ’’ ಎಂದು ಸೇಥಿ ತಿಳಿಸಿದ್ದಾರೆ. ರಾಯಭಾರಿಯಾಗಿ ಆಯ್ಕೆಯಾಗಿರುವುದು ಮಹಾಗೌರವ. ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸುವೆ ಎಂದು 42ರ ಹರೆಯದ ಅಖ್ತರ್ ಹೇಳಿದ್ದಾರೆ.

ಅಖ್ತರ್ ಪಾಕ್ ಪರ 46 ಟೆಸ್ಟ್ ಪಂದ್ಯಗಳಲ್ಲಿ 178 ವಿಕೆಟ್‌ಗಳನ್ನು ಹಾಗೂ 163 ಏಕದಿನ ಪಂದ್ಯಗಳಲ್ಲಿ 247 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News