ಕತರ್ ಓಪನ್: ಕ್ವಿಟೋವಾಗೆ ಚಾಂಪಿಯನ್ ಕಿರೀಟ

Update: 2018-02-19 05:56 GMT

ದೋಹಾ,ಫೆ.19: ಝೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಕತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಕ್ವಿಟೋವಾ ಸ್ಪೇನ್‌ನ ಗಾರ್ಬೈನ್ ಮುಗುರುಝರನ್ನು 3-6, 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

 ಕ್ವಿಟೋವಾ ದೋಹಾದಲ್ಲಿ ಎರಡನೇ ಬಾರಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು. ವೃತ್ತಿಜೀವನದಲ್ಲಿ 22ನೇ ಪ್ರಶಸ್ತಿ ತನ್ನದಾಗಿಸಿಕೊಂಡರು. ಸತತ 13 ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ಗೆಲುವಿನ ದಾಖಲೆ ಮುಂದುವರಿಸಿದ ಕ್ವಿಟೋವಾ ಈ ವಾರ ವಿಶ್ವದ ನಂ.1 ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ಸಹಿತ ನಾಲ್ವರು ಪ್ರಮುಖ ಆಟಗಾರ್ತಿಯರನ್ನು ಸೋಲಿಸಿ ಕತರ್ ಓಪನ್ ಫೈನಲ್ ತಲುಪಿದ್ದರು.

 2016ರ ಡಿಸೆಂಬರ್‌ನಲ್ಲಿ ಮನೆಯಲ್ಲಿದ್ದಾಗಲೇ ಅಪರಿಚಿತನಿಂದ ಕೈಗೆ ಚೂರಿ ದಾಳಿಗೊಳಗಾಗಿ ದೀರ್ಘ ಸಮಯ ಟೆನಿಸ್‌ನಿಂದ ದೂರ ಉಳಿದಿದ್ದ ಕ್ವಿಟೋವಾ ಇದೀಗ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News