ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಮುಂಬೈ ಶಾಖೆಗೆ ಬೀಗ ಮುದ್ರೆ

Update: 2018-02-19 06:35 GMT

  ಹೊಸದಿಲ್ಲಿ, ಫೆ.19: ಶ್ರೀಮಂತ ಜ್ಯುವೆಲ್ಲರ್ ನೀರವ್ ಮೋದಿ ಭಾಗಿಯಾಗಿರುವ 11,300 ಕೋ.ರೂ. ವಂಚನೆ ಪ್ರಕರಣದ ಕೇಂದ್ರ ಬಿಂದು ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ(ಪಿಎನ್‌ಬಿ) ಮುಂಬೈ ಶಾಖೆಗೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಸೋಮವಾರ ಬೀಗಮುದ್ರೆ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಬ್ಯಾಂಕಿಂಗ್ ಇತಿಹಾಸದ ಅತ್ಯಂತ ದೊಡ್ಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪಿಎನ್‌ಬಿಯ ಇಬ್ಬರು ಉದ್ಯೋಗಿಗಳು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ನೀರವ್ ಮೋದಿಯ ಫೈರ್ ಸ್ಟಾರ್ ಡೈಮಂಡ್ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್‌ಒ)ವಿಪುಲ್ ಅಂಬಾನಿಯನ್ನು ಸಿಬಿಐ ತನಿಖೆ ನಡೆಸುತ್ತಿದೆ.

ಮುಂಬೈನ ಬ್ರಾಡಿ ರೋಡ್‌ನಲ್ಲಿರುವ ಪಿಎನ್‌ಬಿ ಬ್ಯಾಂಕ್ ಶಾಖೆಯಲ್ಲಿ ಸಿಬಿಐ ಅಧಿಕಾರಿಗಳು ರವಿವಾರ ತೀವ್ರ ಶೋಧ ಕಾರ್ಯಾಚರಣೆ ನಡೆಸಿದೆ. ಇದೇ ಶಾಖೆಯಲ್ಲಿ ನೀರವ್ ಮೋದಿ ಹಾಗೂ ಅವರ ವ್ಯವಹಾರದ ಪಾಲುದಾರ, ಮೆಹುಲ್ ಚೊಕ್ಸಿ ಭಾರೀ ವಂಚನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News