ಫೆ.21ರಂದು ಶಿರಾಲಿಯಲ್ಲಿ ಸೌಹಾರ್ದ ಸಮಾವೇಶ

Update: 2018-02-19 06:35 GMT

ಭಟ್ಕಳ, ಫೆ.19: ಶಿರಾಲಿಯ ಹಿಂದೂ, ಮುಸ್ಲಿಮ್ ಕ್ರೈಸ್ತ ಸಮಾಜ ಬಾಂಧವರ ಸಹಕಾರದೊಂದಿಗೆ ಫೆ.21ರಂದು ಸಂಜೆ 4:30ಕ್ಕೆ ಶಿರಾಲಿ ಜನತಾ ವಿದ್ಯಾಲಯ ಪ್ರೌಢಶಾಲಾ ಮೈದಾನದಲ್ಲಿ ‘ಹಲವು ಧರ್ಮಗಳು ಒಂದು ಭಾರತ’ ಸೌಹಾರ್ದ ಸಮಾವೇಶ ಆಯೋಜಿಸಲಾಗಿದೆ.

ಜಮಾಅತುಲ್ ಮುಸ್ಲಿಮೀನ್ ಶಿರಾಲಿ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಜಂಟಿಯಾಗಿ ಆಯೋಜಿಸಿರುವ ಈ ಸಮಾವೇಶದಲ್ಲಿ ಧರ್ಮಸ್ಥಳದ ಶ್ರೀರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮುಂಡಳಿ ಚರ್ಚ್‌ನ ಧರ್ಮಗುರು ಫಾ.ನಿಕೋಲಸ್ ಡಿಸೋಜ ಹಾಗೂ ಮಂಗಳೂರು ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಸೌಹಾರ್ದ ಸಂದೇಶ ನೀಡುವರು. ಶಿರಾಜಿ ಜನತಾ ವಿದ್ಯಾಲಯದ ಅಧ್ಯಕ್ಷ ಡಿ.ಜೆ. ಕಾಮತ್ , ಅಳ್ವೆಕೋಡಿ ದೇವಸ್ಥಾನದ ಧರ್ಮದರ್ಶಿಗಳಾದ ಅನಂತ್ ನಾಯ್ಕ, ನಾರಾಯಣ ದೈಮನೆ, ಶಿರಾಲಿಯ ನಾಮಧಾರಿ ಸಂಘದ ಅಧ್ಯಕ್ಷ ಬಿ.ಕೆ.ನಾಯ್ಕ, ಮೌಲಾನ ನಾಸಿರುಲ್ ಇಸ್ಲಾಮ್ ನದ್ವಿ, ಜ.ಇ.ಹಿಂದ್ ಭಟ್ಕಳ ಘಟಕದ ಅಧ್ಯಕ್ಷ ಮುಜಾಹಿದ್ ಮುಸ್ತಫ, ಪಳ್ಳಿಹಕ್ಕಲ್ ರಹ್ಮಾನಿಯ ಮಸೀದಿಯ ಅಧ್ಯಕ್ಷ ಖ್ವಾಜ ಶೇಖ್, ಗುಡಿಹಿತ್ತಲ್ ಅಲಿಮಿಯಾ ಮಸೀದಿಯ ಅಧ್ಯಕ್ಷ ಮುಹಿಯುದ್ದೀನ್ ಸಾಹೇಬ್, ಜ.ಇ. ಹಿಂದ್ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಶಿರಾಲಿ ಜೆ.ವಿ. ಕಾಲೇಜಿನ ಪ್ರಾಂಶುಪಾಲ ಎ.ಬಿ.ರಾಮರಥ, ಶಿರಾಲಿ ಗ್ರಾಪಂ ಅಧ್ಯಕ್ಷ ವೆಂಕಟೇಶ್ ನಾಯ್ಕ ಮೊದಲಾದವರು ಭಾಗವಹಿಸುವರು ಎಂದು ಸೌಹಾರ್ದ ಸಮಾವೇಶ ಸ್ವಾಗತ ಸಮಿತಿಯ ಅಧ್ಯಕ್ಷ ಡಿ.ಜೆ.ಕಾಮತ್ ಹಾಗೂ ಸಂಚಾಲಕ ಎಂ.ಆರ್.ಮಾನ್ವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News