ಸಂಸದರ ವೇತನದ ಕುರಿತು ಸ್ಪಷ್ಟೀಕರಣ ನೀಡಿ: ಕೇಂದ್ರಕ್ಕೆ ಸುಪ್ರೀಂ ಆದೇಶ

Update: 2018-02-20 17:06 GMT

ಹೊಸದಿಲ್ಲಿ, ಫೆ.20: ಸಂಸದರ ವೇತನವನ್ನು ನಿರ್ಧರಿಸಲು ಯಾವುದೇ ಸಂಸ್ಥೆ ಯಾಕಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರದಂದು ಕೇಂದ್ರವನ್ನು ಪ್ರಶ್ನಿಸಿದೆ. ಕಳೆದ 12 ವರ್ಷಗಳಿಂದ ಈ ಪ್ರಶ್ನೆಯು ಹಾಗೇಯೇ ಬಾಕಿಯುಳಿದಿದ್ದು ಇದಕ್ಕೆ ಮಾರ್ಚ್ ಆರರ ಒಳಗಾಗಿ ಉತ್ತರ ನೀಡುವಂತೆ ಘನ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಈ ಬಗ್ಗೆ ನಿಮ್ಮ ನಿಲುವೇನು?, ನಿಮ್ಮ ಅಫಿದಾವಿತ್ ಕೇವಲ ಈ ವಿಷಯವು ಪರಿಶೀಲನೆಯಲ್ಲಿದೆ ಎಂದಷ್ಟೇ ಹೇಳುತ್ತದೆ ಎಂದು ನ್ಯಾಯಾಧೀಶರಾದ ಚೆಲಮೇಶ್ವರ್ ನೇತೃತ್ವದ ಪೀಠವು ಕೇಂದ್ರದ ಪರ ವಕೀಲರನ್ನು ಪ್ರಶ್ನಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ವಕೀಲರು ಸರಕಾರದಿಂದ ಮಾಹಿತಿ ಪಡೆಯಲು ಒಂದು ವಾರದ ಸಮಯಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ನ್ಯಾಯಾಲಯವು ಲಾಭರಹಿತ ಸಂಸ್ಥೆ ಲೋಕ್ ಪ್ರಹರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಆದೇಶವನ್ನು ನೀಡಿದೆ. ಸಂಸದರ ವೇತನವನ್ನು ನಿರ್ಧರಿಸಲು ಸಂಸ್ಥೆಯನ್ನು ರಚಿಸುವ ಕುರಿತು 2006ರಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಒಪ್ಪಲಾಗಿದ್ದರೂ ಇದುವರೆಗೂ ಆ ಬಗ್ಗೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News