ಗಂಗಾವತಿ: ಪ್ರಥಮ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪದಕ

Update: 2018-02-20 17:19 GMT

ಗಂಗಾವತಿ,ಪೆ.20: ಇಲ್ಲಿನ ಶ್ರೀ ಕೃಷ್ಣದೇವರಾಯ ಭವನದಲ್ಲಿ ಗಂಗಾವತಿ ತಾಲೂಕು ಕರಾಟೆ ಶಿಕ್ಷಕರ ಸಂಘದ ಅಡಿಯಲ್ಲಿ ಯೂತ್ ಕರಾಟೆ ಫೆಡೆರೆಶನ್ ವತಿಯಿಂದ 2ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಥಮ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಬ್ಲೂ ಡ್ರ್ಯಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಕರಾಟೆ ಪಟುಗಳು 3 ಚಿನ್ನದ ಪದಕ, 6 ಬೆಳ್ಳಿ ಪದಕ ಮತ್ತು 1ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಬ್ಲೂ ಡ್ರ್ಯಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ವತಿಯಿಂದ 10 ವಿದ್ಯಾರ್ಥಿಗಳು ಭಾಗವಹಿಸಿದ್ದು, ಫೈಟ್ ವಿಭಾಗದ ವಿಭಿನ್ನ ತೂಕದಲ್ಲಿ ಯಶ್. ದೇವಿಕಾ ಕಂಚಿನ ಪದಕ, ನಂದಿನಿ. ಕೆ ಬೆಳ್ಳಿ ಪದಕ. ರೋಹಿತ ರಾಥೊಡ್ ಬೆಳ್ಳಿ ಪದಕ. ಅರ್ಜುನ ಬೆಳ್ಳಿ ಪದಕ. ವಿನಯ ಬಂಗಾರದ ಪದಕ. ಕಾರ್ತಿಕ ಕೆ ಬಂಗಾರದ ಪದಕ ಮತ್ತು ಅಜಯ್ ಕುಮಾರ್ ಬಂಗಾರದ ಪದಕ ಕೊನೆಯದಾಗಿ ಗುಂಪು ಕಟಾ ವಿಭಾಗದಲ್ಲಿ ರೋಹಿತ, ಅರ್ಜುನ, ಮತ್ತು ಮನೊಜ್ ದ್ವೀತಿಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆಂದು ತರಬೇತಿದಾರರಾದ ಷಣ್ಮುಖಪ್ಪ, ಸಂತೋಷ್ ರಾಟೊಡ್ ಮತ್ತು ಟಿ. ಫಕ್ರುದ್ದಿನ್ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News