ಮೊಬೈಲ್ ಸಿಮ್ ನಂಬರ್ ಡಿಜಿಟ್ ಹೆಚ್ಚಾಗುತ್ತದೆಯೇ?: ಇಲ್ಲಿದೆ ಮಾಹಿತಿ

Update: 2018-02-21 10:48 GMT

ಹೊಸದಿಲ್ಲಿ, ಫೆ.21: ಜುಲೈ 1ರಿಂದ ಮೊಬೈಲ್ ಸಿಮ್ ನಂಬರ್ ಗಳು 13 ಡಿಜಿಟ್ ಗಳಿಗೆ ಬದಲಾಗಲಿದೆ ಎನ್ನುವ ಸುದ್ದಿಯೊಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ಈ ವರದಿ ಸುಳ್ಳೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಏಕೆಂದರೆ ದೂರಸಂಪರ್ಕ ಇಲಾಖೆಯ ಮೆಷಿನ್ ಟು ಮೆಷಿನ್  ಅಥವಾ ಎಂ2ಎಂ ನಂಬರ್ ಬದಲಾವಣೆಯ ಆದೇಶವನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿತ್ತು.

ಸ್ವೈಪ್ ಮೆಷಿನ್, ಕಾರುಗಳು, ವಿದ್ಯುತ್ ಮೀಟರ್ ಇತ್ಯಾದಿ ಡಿವೈಸ್ ಗಳಲ್ಲಿರುವ ಸಿಮ್ ಗಳಿಗೆ ಬಳಸುವ ಸಂಖ್ಯೆಯಾಗಿದೆ ಎಂ2ಎಂ ನಂಬರ್. ಈ ಆದೇಶದಿಂದ ಮೊಬೈಲ್ ಸಿಮ್ ಸಂಖ್ಯೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಭಾರ್ತಿ ಏರ್ ಟೆಲ್, ರಿಲಾಯನ್ಸ್ ಜಿಯೋ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News