ಎಸ್‌ಪಿಜಿ ಮುಖ್ಯಸ್ಥನ ಸೋಗಿನಲ್ಲಿ 88 ಲಕ್ಷ ರೂ. ವಂಚಿಸಿದ ಕಾನ್‌ಸ್ಟೆಬಲ್

Update: 2018-02-21 12:45 GMT

ಥಾಣೆ, ಫೆ.21: ತಾನು ಸಿಬಿಐಯ ವಿಶೇಷ ಸುರಕ್ಷಾ ಪಡೆ(ಎಸ್‌ಪಿಜಿ)ಯ ಮುಖ್ಯಸ್ಥ ನೆಂದು ನಂಬಿಸಿ ನಾಲ್ವರು ವ್ಯಕ್ತಿಗಳಿಗೆ 88 ಲಕ್ಷ ರೂ. ವಂಚಿಸಿದ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಕಾನ್‌ಸ್ಟೆಬಲ್ ಅನಂತ್‌ಪ್ರಸಾದ್ ಪಾಂಡೆ (54 ವರ್ಷ)ಯನ್ನು ಯೆಲ್ಲೊ ಗೇಟ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಕಳೆದ ಡಿಸೆಂಬರ್‌ನಿಂದ ಆತ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.

 ಆದರೆ ಮಾರ್ಚ್ 2016ರಿಂದ ಡಿಸೆಂಬರ್ 2017ರ ಅವಧಿಯಲ್ಲಿ ಆತ ಎಸ್‌ಪಿಜಿಯ ಮುಖ್ಯಸ್ಥ ಎಂದು ನಂಬಿಸಿ, ಹಲವರಿಗೆ ಅನುಕೂಲ ಮಾಡಿಕೊಡುವ ಆಮಿಷವೊಡ್ಡಿ 88 ಲಕ್ಷ ರೂ. ಪಡೆದಿದ್ದಾನೆ. ಸಾರಾಯಿ ಅಂಗಡಿಗೆ ಪರವಾನಿಗೆ , ರೈಲ್ವೇ ಸ್ಟೇಷನ್‌ನಲ್ಲಿ ಸ್ಟಾಲ್‌ಗಳನ್ನು ದೊರಕಿಸಿಕೊಡುವುದು, ರೈಲ್ವೇಯಲ್ಲಿ ಟಿಕೆಟ್ ಪರಿವೀಕ್ಷಕರ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿ 88 ಲಕ್ಷ ರೂ. ಪಡೆದಿದ್ದ. ಆದರೆ ಉದ್ಯೋಗವನ್ನೂ ದೊರಕಿಸಿಕೊಟ್ಟಿಲ್ಲ ಅಥವಾ ಹಣವನ್ನೂ ಮರಳಿಸಿಲ್ಲ ಎಂದು ಸಂತ್ರಸ್ತ ವ್ಯಕ್ತಿಯೊಬ್ಬ ನೀಡಿದ ದೂರಿನ ಹಿನ್ನೆಲೆಯಲ್ಲಿ ಥಾಣೆ ಪೊಲೀಸರು ಆತನನ್ನು ನಲಸೊಪಾರದಲ್ಲಿ ಬಂಧಿಸಿದ್ದಾರೆ. ಆತನಿಗೆ 7 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News