ಇಪಿಎಫ್‌ಒ ಬಡ್ಡಿದರ ಶೇ.8.55ಕ್ಕೆ ಇಳಿಕೆ

Update: 2018-02-21 18:47 GMT

ಹೊಸದಿಲ್ಲಿ, ಫೆ.21: ಇಪಿಎಫ್‌ಒ( ಉದ್ಯೋಗಿಗಳ ಭವಿಷ್ಯನಿಧಿ ಬಡ್ಡಿದರ)ವನ್ನು ಶೇ.8.55ಕ್ಕೆ ಇಳಿಕೆ ಮಾಡಲಾಗಿದ್ದು ಕಳೆದ ಐದು ವರ್ಷಗಳಲ್ಲೇ ಇದು ಅತ್ಯಂತ ಕಡಿಮೆ ಬಡ್ಡಿದರವಾಗಿದೆ.

  ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಕಳೆದ ವರ್ಷ ಶೇ.8.65 ಬಡ್ಡಿದರ ನಿಗದಿಗೊಳಿಸಿತ್ತು. ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ ಟ್ರಸ್ಟಿಗಳ ಸಭೆಯ ಬಳಿಕ ಬಡ್ಡಿದರ ಕಡಿತಗೊಳಿಸುವ ಘೋಷಣೆ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಪ್ರಸಕ್ತ ಇರುವ ಅನಿಶ್ಚಿತತೆಯ ಸಂದರ್ಭವನ್ನು ಪರಿಗಣಿಸಿದರೆ ಇದು ಅತ್ಯುತ್ತಮ ದರವಾಗಿದೆ ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಎಂ.ಸತ್ಯವಥಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ಬಡ್ಡಿ ಇಳಿಕೆಯಿಂದ ಇಪಿಎಫ್ ಸದಸ್ಯರ ಉಳಿತಾಯದ ಮೇಲೆ ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ ಹಾಗೂ ಮಧ್ಯಮ ವರ್ಗದ ಜನ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಬಗ್ಗೆ ಅಸಮಾಧಾನಗೊಳ್ಳಬಹುದು ಎಂದು ಸಭೆಯಲ್ಲಿ ಹಾಜರಿದ್ದ ಇಪಿಎಫ್‌ಒ ಸಂಘಟನೆಯಲ್ಲಿರುವ ಉದ್ಯೋಗಿಗಳ ಪ್ರತಿನಿಧಿಗಳು ಸರಕಾರದ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News