ನಗದು ರಹಿತ ವ್ಯವಹಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ಸಾಲ ಸೌಲಭ್ಯದ ಮಾಹಿತಿ ಕಾರ್ಯಾಗಾರ

Update: 2018-02-22 18:36 GMT

ಶಿಕಾರಿಪುರ,ಫೆ.22: ನಗದು ರಹಿತ ವ್ಯವಹಾರದಿಂದ ಮಾತ್ರ ದೇಶ ಆರ್ಥಿಕವಾಗಿ ಸದೃಡವಾಗಲು ಸಾದ್ಯ ಈ ದಿಸೆಯಲ್ಲಿ ಪ್ರತಿಯೊಬ್ಬರೂ ಆರ್ಥಿಕವಾಗಿ ಸಾಕ್ಷರರಾಗಬೇಕಾಗಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸಾಲೊಮನ್ ಮೆನೆಜಸ್ ತಿಳಿಸಿದರು.
   
ಗುರುವಾರ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ನಬಾರ್ಡ ಹಾಗೂ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ವತಿಯಿಂದ ನಡೆದ ನಗದು ರಹಿತ ವ್ಯವಹಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ಸಾಲ ಸೌಲಭ್ಯದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಗದು ರಹಿತ ವ್ಯವಹಾರದಿಂದ ಹಣ ಹಾಗೂ ಸಮಯದ ಉಳಿತಾಯವಾಗಲಿದ್ದು,ಪ್ರಸ್ತುತ ಸಂದರ್ಬದಲ್ಲಿ ನಗದು ರಹಿತ ವ್ಯವಹಾರ ಅತ್ಯಂತ ಅಗತ್ಯವಾಗಿದೆ ಎಂದ ಅವರು ದೇಶ ಆರ್ಥಿಕವಾಗಿ ಬಲಿಷ್ಟವಾಗಲು ನಗದು ರಹಿತ ವ್ಯವಹಾರದಿಂದ ಮಾತ್ರ ಸಾದ್ಯ.ಆರ್ಥಿಕ ಸಾಕ್ಷರತೆಯಿಂದ ಮಾತ್ರ ಜನತೆ ಆರ್ಥಿಕವಾಗಿ ಸ್ವಾವಲಂಭನೆಯನ್ನು ಸಾಧಿಸಬಹುದಾಗಿದೆ ಬ್ಯಾಂಕ್ ಮೂಲಕ ದೊರೆಯುವ ಸಾಲ ಸೌಲಭ್ಯವನ್ನು ಪಡೆಯಲು ಆರ್ಥಿಕ ಸಾಕ್ಷರತೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಕುಟುಂಬದಲ್ಲಿನ ಅನಾವಶ್ಯಕ ಖರ್ಚು ವೆಚ್ಚವನ್ನು ಕಡಿಮೆಗೊಳಿಸಿ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿಕೊಂಡು ಅಭಿವೃದ್ದಿ ಹೊಂದುವಂತೆ ಅವರು ಕಿವಿಮಾತು ಹೇಳಿದರು.

ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಗುಡುದಯ್ಯ ಉಡುಗಣಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರು,ಕೂಲಿ ಕಾರ್ಮಿಕರ ಹಲವು ಮಕ್ಕಳು ಪ್ರತಿಭಾನ್ವಿತರಿದ್ದು ಶಿಕ್ಷಣದಿಂದ ವಂಚಿತವಾಗದಂತೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯವಿದೆ ಎಂದು ತಿಳಿಸಿದರು.ಬ್ಯಾಂಕ್ ಸೌಲಭ್ಯದ ಪ್ರಯೋಜನ ಪಡೆದು ಶಿಕ್ಷಣ ಪೂರ್ಣಗೊಂಡ ನಂತರದಲ್ಲಿ ಸಾಲ ಮರುಪಾವತಿಯ ಅವಕಾಶವಿದೆ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಬ್ಯಾಂಕ್ ಖಾತೆಯ ಆಧಾರ್ ಕಾರ್ಡ ಸಂಖ್ಯೆ ಜೋಡಣೆಗೆ ಇದೇ ಮಾ.30 ಅಂತಿಮ ದಿನವಾಗಿದ್ದು ತಪ್ಪಿದಲ್ಲಿ ಖಾತೆ ನಿಷ್ಕ್ರಿಯವಾಗಲಿದೆ ಎಂದು ತಿಳಿಸಿದ ಅವರು ನಗದು ರಹಿತ ವ್ಯವಹಾರ ಅಳವಡಿಸಿಕೊಂಡಲ್ಲಿ ತ್ವರಿತವಾಗಿ ಬ್ಯಾಂಕ್ ನಲ್ಲಿನ ಸೇವೆಯನ್ನು ಪಡೆಯಲು ಸಾದ್ಯ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ನಬಾರ್ಡ ವಿಭಾಗೀಯ ಪ್ರಬಂಧಕ ಬಿ.ರವಿ ಮಾತನಾಡಿ,ಪ್ರತಿ ಕುಟುಂಬಕ್ಕೆ ಆರ್ಥಿಕ ಬದ್ದತೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.ನಬಾರ್ಡ ದೇಶದ ಪ್ರತಿಯೊಂದು ಕ್ಷೇತ್ರದ ಜನತೆಗೆ ಆರ್ಥಿಕ ಸಹಕಾರವನ್ನು ಕಲ್ಪಿಸುತ್ತಿದೆ.ಇದೀಗ ಕೇಂದ್ರ ವಿಮಾ ಸೌಲಭ್ಯವನ್ನು ಜಾರಿಗೊಳಿಸಿದ್ದು ವಾರ್ಷಿಕ ಕೇವಲ 12 ರೂ. ಹಾಗೂ 330 ರೂ.ಪಾವತಿಸಿದಲ್ಲಿ ಆಪತ್ಕಾಲದಲ್ಲಿ 2 ಲಕ್ಷ ಪರಿಹಾರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ರೈತರು ರೈತ ಗುಂಪು ರಚಿಸಿಕೊಂಡು ಬ್ಯಾಂಕ್ ನಿಂದ ಆರ್ಥಿಕ ಸಹಕಾರವನ್ನು ಪಡೆಯಬಹುದಾಗಿದೆ,ಕೃಷಿ ಯಲ್ಲಿನ ಉನ್ನತ ಸಾಧನೆಗೆ 25 ಲಕ್ಷ ವರೆಗೆ ಸಾಲದ ಸಹಕಾರಕ್ಕೆ ಬ್ಯಾಂಕ್ ನಲ್ಲಿ ಅವಕಾಶವಿದೆ ಎಂದ ಅವರು ಸೂಕ್ತ ಯೋಜನೆಯ ಮೂಲಕ ವಿದ್ಯಾವಂತ ಕೃಷಿಕರು ಪ್ರಯೋಜನ ಪಡೆಯುವಂತೆ ತಿಳಿಸಿದರು.

ವೇದಿಕೆಯಲ್ಲಿ ಸುಣ್ಣದಕೊಪ್ಪ ಕೆನರಾ ಬ್ಯಾಂಕ್ ಪ್ರಬಂಧಕ ಡಿ.ಅಜಿತ್‌ಕುಮಾರ್,ಗ್ರಾ.ಪಂ ಉಪಾಧ್ಯಕ್ಷ ಕರಿಬಸಪ್ಪ,ಸದಸ್ಯ ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸೌಮ್ಯ ಸ್ವಾಗತಿಸಿ,ಯೋಗೇಶ್ ನಿರೂಪಿಸಿ,ಕಲಾವತಿ ವಂದಿಸಿದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News