ನೀರವ್ ಮೋದಿ,ಮೆಹುಲ್ ಚೋಕ್ಸಿ , ಅಮಿ ಮೋದಿಗೆ ಸಮನ್ಸ್

Update: 2018-02-23 05:49 GMT

ಹೊಸದಿಲ್ಲಿ, ಫೆ.23: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 11,400 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇ.ಡಿ.) ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ಅಮಿ ಮೋದಿಗೆ ಸಮನ್ಸ್ ಜಾರಿ ಮಾಡಿದೆ.

ಫೆ.22ರಂದು ಇವರಿಗೆ ಈಗಾಗಲೇ ಸಮನ್ಸ್ ಜಾರಿ ಮಾಡಲಾಗಿತ್ತು.  ಆದರೆ ಆರೋಪಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ಫೆ.26ರ ಒಳಗಾಗಿ ಹಾಜರಾಗುವಂತೆ ಮತ್ತೆ ಜಾರಿ ನಿರ್ದೇಶಾಲಯ ಜಾರಿ ಮಾಡಿದೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್‌ (ಪಿಎನ್‌ಬಿ) ವಂಚನೆ ಹಗರಣದ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ  94.52 ಕೋಟಿ ರೂ.  ಮೌಲ್ಯದ ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳನ್ನು  ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿತ್ತು.

ನೀರವ್ ಮೋದಿಗೆ ಸೇರಿದ ರೋಲ್ಸ್ ರಾಯ್ಸ್‌ ಘೋಸ್ಟ್, ಪೋಶಾ ಪನಮೆರಾ, ಟೊಯೊಟಾ ಫಾರ್ಚೂನರ್, ಇನೋವಾ, ಹೋಂಡಾ ಕಂಪೆನಿಯ ಮೂರು ಸೆಡಾನ್‌ಗಳು ಹಾಗೂ ಮರ್ಸಿಡಿಸ್ ಬೆಂಜ್‌ನ ಎರಡು ಜಿಎಲ್ ಎಸ್‌ಯುವಿ ಸೇರಿದಂತೆ ಒಟ್ಟು 9 ಐಶಾರಾಮಿ ಕಾರುಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿತ್ತು.

ಇದೇ ವೇಳೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಲೆಕ್ಕೆಪರಿಶೋಧಕರಿಗೆ ಭಾರತದ ಲೆಕ್ಕಪರಿಶೋಧಕರ ಸಂಸ್ಥೆ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News