ಮೈಸೂರು: ಮತಯಂತ್ರದ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ

Update: 2018-02-23 18:10 GMT

ಮೈಸೂರು,ಫೆ.23: ಮುಂಬರುವ 2018ರ ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇಂದು ಮತಯಂತ್ರಗಳನ್ನ ಸುರಕ್ಷಿತವಾಗಿಡುವ ಸ್ಥಳಗಳನ್ನ ಜಿಲ್ಲಾಧಿಕಾರಿ ಡಿ.ರಂದೀಪ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.

ಮುಂದಿನ ವಿಧಾನಸಭಾ ಚುನಾವಣೆಗೆ ಕೇಲವ 2 ತಿಂಗಳು ಬಾಕಿಯಿದ್ದು, ಜಿಲ್ಲಾಡಳಿತ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನ ಇಡುವ ಸ್ಥಳವನ್ನ ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಗರದ ವಿದ್ಯಾವರ್ಧಕ ಕಾಲೇಜು ಮುಂಭಾಗದ ನಗರ ಪಾಲಿಕೆ ಚುನಾವಣಾ ಶಾಖೆ ಗೋಡೌಡ್‍ನಲ್ಲಿ 3500 ವಿವಿಪ್ಯಾಡ್ ಭದ್ರವಾಗಿ ಇಡಲಾಗಿದೆ. ಚುನಾವಣೆಗಾಗಿ ತಮಿಳುನಾಡಿನಿಂದ 3600 ಬ್ಯಾಲೆಟ್ ಯೂನಿಟ್, 3000 ಕಂಟ್ರೋಲ್ ಯೂನಿಟ್‍ಗಳು ಮೈಸೂರಿಗೆ ಬಂದಿದ್ದು, ಮುಂದಿನ ಸೋಮವಾರದ ಬಳಿಕ ಎಲ್ಲ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ವಿವಿ ಪ್ಯಾಡ್‍ಗಳ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು. 

ಇವಿಎಂ ಯಂತ್ರದ ಬಳಿ ಬಾಂಬ್ ಪತ್ತೆ, ಶ್ವಾನದಳದಿಂದಲೂ ಪರಿಶೀಲನೆ ನಡೆದಿದೆ. ಇವಿಎಂ, ವಿವಿಪ್ಯಾಡ್ ಪಾರದರ್ಶಕ ನಿಟ್ಟಿನಲ್ಲಿ ಮುಖಂಡರ ಸಮ್ಮುಖದಲ್ಲಿ ಪರಿಶೀಲನೆ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ವಿವಿ ಪ್ಯಾಡ್ ಕೆಲವು ಕಡೆ ಕೈ ಕೊಡುವ ಸಾಧ್ಯತೆಯ ಹಿನ್ನೆಲೆ 40 ರಷ್ಟು ಹೆಚ್ಚಿನ ವಿವಿ ಪ್ಯಾಡ್‍ಗಳನ್ನು ಈ ಬಾರಿ ಸಂಗ್ರಹಣೆ ಮಾಡಲಾಗಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News