ಭಾರತದ ಸಂಸತ್ತು ಬಸವಣ್ಣನವರ ಕನಸಾಗಿದೆ : ರಾಹುಲ್ ಗಾಂಧಿ

Update: 2018-02-25 07:28 GMT

ಬಾಗಲಕೋಟೆ,ಫೆ.25:ನಮ್ಮ ಪಾರ್ಲಿಮೆಂಟನ್ನು ಕರ್ನಾಟಕವೇ ನೀಡಿದೆ. ದೇಶದ ಸಂವಿಧಾನದಲ್ಲಿ ಬಸವಣ್ಣನವರ ಅಲೋಚನೆ ಇದೆ.ಸಂವಿಧಾನದ ರಚನೆಯಲ್ಲಿ ಅವರ ಸಿದ್ದಾಂತವಿದೆ. ಭಾರತದ ಸಂಸತ್ತು ಬಸವಣ್ಣನವರ ಕನಸಿನ ಕೂಸಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

ಜಮಖಂಡಿಯ ಚಿಕ್ಕಪಡಸಲಗಿ ಬ್ಯಾರೇಜ್ ಬಳಿ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಷಣ ಮಾಡಿದ ಅವರು ಬಸವಣ್ಣನವರ ಅನುಭವ ಮಂಟಪದ ಕನಸು ನಮ್ಮ ಸಂಸತ್ತು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡಿದೆ .ನಾವು ಜನತೆಗಾಗಿ ಸರಕಾರ ಮಾಡುತ್ತೇವೆ. ಕರ್ನಾಟಕದಲ್ಲಿ ಬಡವರಿಗೆ ಉಚಿತ ಅಕ್ಕಿಯನ್ನು ಸರಕಾರ ನೀಡುತ್ತಿದೆ. ಸಿದ್ದರಾಮಯ್ಯನವರ ಸರಕಾರ ಬಸವಣ್ಣನ ಹಾದಿಯಲ್ಲಿದೆ. ನುಡಿದಂತೆ ನಡೆಯುತ್ತದೆ. ಎಲ್ಲರಿಗಾಗಿ ದುಡಿಯುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರ ನಡುವಿನ ವ್ಯತ್ಯಾಸ ಏನೆಂದರೆ ಕಾಂಗ್ರೆಸ್ ನುಡಿದಂತೆ ನಡೆಯುತ್ತದೆ. ಆದರೆ  ಬಿಜೆಪಿ ನುಡಿದಂತೆ ನಡೆಯುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರೈತರ ಸಾಲ ಮನ್ನಾ ಮಾಡಿಲ್ಲ. ಶ್ರೀಮಂತರ ವ್ಯಾಪಾರಿಗಳ ಸಾಲ ಮನ್ನಾ ಮಾಡಿದೆ ಎಂದು ಆರೋಪಿಸಿದರು.

ಕೇಂದ್ರದ ಬಿಜೆಪಿ ಸರಕಾರ ಕೆಲವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬಡವರ ದುಡ್ಡು ಶ್ರೀಮಂತರ ಜೇಬಿಗೆ ಹೋಗುತ್ತಿದೆ. ಕರ್ನಾಟಕ ಸರಕಾರ ರಾಜ್ಯದ ಜನರ ಅಭಿವೃದ್ಧಿಗೆ ಶ್ರಮಿಸುತ್ತದೆ. ಎಸ್‌ಸಿ, ಎಸ್‌ಟಿ ಕಲ್ಯಾಣಕ್ಕೆ ಒತ್ತು ನೀಡಿದೆ

ಶ್ರಮ ಬಿಂದು ಬ್ಯಾರೇಜ್ ನಿರ್ಮಾಣಕ್ಕೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News