ಚಿತ್ರರಂಗದ ಅವಿಭಾಜ್ಯ ಅಂಗ ಎನಿಸಿದ್ದ ನಟಿ ಶ್ರೀದೇವಿ: ಸಿದ್ದರಾಮಯ್ಯ

Update: 2018-02-25 12:33 GMT

ಬೆಂಗಳೂರು, ಫೆ. 25: ಕನ್ನಡವೂ ಒಳಗೊಂಡಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಿತ್ರಗಳಲ್ಲೂ ಅಭಿನಯಿಸಿ, ನಂತರ ಹಿಂದಿ ಚಿತ್ರರಂಗದಲ್ಲಿ ಬಲವಾಗಿ ನೆಲೆಕಂಡುಕೊಂಡ ಸುಪ್ರಸಿದ್ಧ ನಾಯಕ ನಟಿ ಶ್ರೀದೇವಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ತನ್ನ ನಾಲ್ಕನೇ ವರ್ಷದಲ್ಲೇ ಬಾಲನಟಿಯಾಗಿ ಬೆಳ್ಳಿತೆರೆಗೆ ಪ್ರವೇಶಿಸಿ, ಹದಿಮೂರು ವರ್ಷವಾದಾಗ ನಾಯಕ ನಟಿಯಾಗಿ ವಿವಿಧ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ, ಮದುವೆಯಾದ ಬಳಿಕ ಹನ್ನೆರಡು ವರ್ಷಗಳ ವಿರಾಮ ಪಡೆದ ನಂತರವೂ ಐದು ದಶಕಗಳ ಕಾಲ ಭಾರತೀಯ ಚಿತ್ರರಂಗದ ಅವಿಭಾಜ್ಯ ಅಂಗ ಎನಿಸಿದ್ದ ಶ್ರೀದೇವಿ ಅವರು ಅದ್ಭುತ ಕಲಾವಿದೆಯಾಗಿದ್ದರು.

ಕನ್ನಡ ಅವತರಣಿಕೆಯಲ್ಲೂ ತೆರೆಕಂಡ ಪ್ರಿಯಾರ ಪಾತ್ರ ಕನ್ನಡ ಚಿತ್ರರಸಿಕರಲ್ಲಿ ಬಹುನಿರೀಕ್ಷೆಯನ್ನು ಮೂಡಿಸಿತ್ತು. ಚೆಲುವು ಮತ್ತು ಸೌಂದರ್ಯದ ಪ್ರತಿರೂಪವಾಗಿದ್ದ ಮೋಹಕ ನಟಿ ಶ್ರೀದೇವಿ ಅವರು ಇಷ್ಟು ಬೇಗ ನಮ್ಮೆಲ್ಲರನ್ನೂ ಅಗಲಿ ಹೋಗಬಾರದಿತ್ತು. ನಟಿ ಶ್ರೀದೇವಿ ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News