ಸ್ವದೇಶಿ ನಿರ್ಮಿತ ರುಸ್ತುಮ್ 2 ಡ್ರೋನ್ ಯಶಸ್ವಿ ಪರೀಕ್ಷಾ ಉಡಾವಣೆ

Update: 2018-02-25 17:10 GMT

ಚಿತ್ರದುರ್ಗ, ಫೆ.25: ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿರುವ ರುಸ್ತುಮ್ 2 ಡ್ರೋನ್ ಅನ್ನು ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೊನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯಶಸ್ವಿ ಪರೀಕ್ಷಾ ಉಡಾವಣೆ ನಡೆಸಲಾಯಿತು. ಮಧ್ಯಮ ಎತ್ತರಕ್ಕೆ ಹಾರಬಲ್ಲ, ದೀರ್ಘ ಬಾಳಿಕೆಯ ಮಾನವರಹಿತ ರುಸ್ತುಮ್ 2 ಅಥವಾ ತಪಸ್-ಬಿಎಚ್-201 ಅನ್ನು ಭಾರತವು ಅಮೆರಿಕದ ಪ್ರಿಡೆಟರ್ ಟ್ರೋನ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರುಸ್ತುಮ್ 1 ಡ್ರೋನ್ ಅನ್ನು ಏಳು ವರ್ಷಗಳ ಹಿಂದೆ 2009ರ ನವೆಂಬರ್ 16ರಂದು ಹೊಸೂರಿನಲ್ಲಿರುವ ತನೇಜಾ ಏರೊಸ್ಪೇಸ್ ಏರ್ ಫೀಲ್ಡ್‌ನಲ್ಲಿ ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು.

24 ಗಂಟೆಗಳ ಕಾಲ ಸತತ ಹಾರಾಟ ನಡೆಸಬಲ್ಲ ರುಸ್ತಮ್ 2 ಕಣ್ಗಾವಲಿನ ಜೊತೆಗೆ ಶಸ್ತ್ರಾಸ್ತ್ರಗಳನ್ನು ಕೂಡಾ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News