ಯಡಿಯೂರಪ್ಪರ ಜನ್ಮದಿನ ಶುಭಾಶಯದ ಫ್ಲೆಕ್ಸ್‌ಗಳಲ್ಲಿ ವಯಸ್ಸು ಮರೆಮಾಚಿದ ಬೆಂಬಲಿಗರು!

Update: 2018-02-27 08:06 GMT

ದಾವಣಗೆರೆ, ಫೆ.27: ರಾಜ್ಯದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಗಳವಾರ 75ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ರಾಜ್ಯ ಬಿಜೆಪಿ ವತಿಯಿಂದ ರೈತ ಸಮಾವೇಶವನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಬಿಎಸ್‌ವೈ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಎಸ್‌ವೈ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರಿ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ. ಫ್ಲೆಕ್ಸ್‌ಗಳಲ್ಲಿ ‘ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆಯಲಾಗಿದ್ದು, ಯಡಿಯೂರಪ್ಪರ ‘ವಯಸ್ಸನ್ನು’ ಬರೆಯದೆ ಮರೆ ಮಾಚಲಾಗಿದೆ.

  75 ವರ್ಷ ದಾಟಿದವರಿಗೆ ಬಿಜೆಪಿಯಲ್ಲಿ ಯಾವುದೇ ಉನ್ನತ ಹುದ್ದೆ ಇಲ್ಲ ಎನ್ನುವುದು ಆ ಪಕ್ಷದ ಅಲಿಖಿತ ನಿಯಮವಾಗಿದೆ. ಕಳೆದ ವರ್ಷ ಯಡಿಯೂರಪ್ಪರಿಗೆ ಹುಟ್ಟುಹಬ್ಬ ಶುಭಾಶಯ ಕೋರಿ ಹಾಕಲಾಗಿದ್ದ ಫ್ಲೆಕ್ಸ್‌ಗಳಲ್ಲಿ 74 ವರ್ಷದ ಶುಭಾಶಯ ಎಂದು ನಮೂದಿಸಲಾಗಿತ್ತು. ಅದರಿಂದ ಬಿಎಸ್‌ವೈ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಹೀಗಾಗಿ ಚುನಾವಣೆ ವರ್ಷವಾಗಿರುವ ಕಾರಣ, ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿರುವ ಬಿಎಸ್‌ವೈ ಶುಭಾಶಯ ಕೋರುವ ಫ್ಲೆಕ್ಸ್‌ಗಳಲ್ಲಿ ವಯಸ್ಸು ಎಷ್ಟೆಂದು ಹಾಕದಿರಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News