ಬಿಜೆಪುರ್ ಉಪಚುನಾವಣೆಯಲ್ಲಿ ಬಿಜೆಡಿ ಜಯಭೇರಿ

Update: 2018-02-28 13:24 GMT

ಒಡಿಶಾ, ಫೆ.28: ಬಿಜೆಪುರ್ ಅಸೆಂಬ್ಲಿ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜು ಜನತಾದಳ (ಬಿಜೆಡಿ) ಜಯ ಗಳಿಸಿದೆ. ಬಿಜೆಡಿಯ ರೀತಾ ಸಾಹು ತನ್ನ ಎದುರಾಳಿ ಬಿಜೆಪಿ ಅಭ್ಯರ್ಥಿ ಅಶೋಕ್ ಪಾಣಿಗ್ರಾಹಿಯವರನ್ನು 41,933 ಮತಗಳಿಂದ ಮಣಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಣಯ ಸಾಹುಗೆ ಮೂರನೆ ಸ್ಥಾನ ಲಭಿಸಿದೆ. ಒಡಿಶಾ ಮುಖ್ಯಮಂತ್ರಿ ಹಾಗು ಬಿಜೆಡಿ ನಾಯಕ ನವೀನ್ ಪಟ್ನಾಯಕ್ ಕಾರ್ಯಕರ್ತರೊಂದಿಗೆ ಸಂಭ್ರಮಾಚರಿಸಿದರು.

“ಬಿಜೆಡಿಯನ್ನು ಆಶಿರ್ವದಿಸಿದ ಜನರಿಗೆ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ. 2019ರ ಚುನಾವಣೆಯಲ್ಲೂ ನಾವು ಜಯ ಗಳಿಸುತ್ತೇವೆ ಎಂಬ ನಂಬಿಕೆಯಿದೆ” ಎಂದು ಪಟ್ನಾಯಕ್ ಹೇಳಿದ್ದಾರೆ.

2017ರ ಆಗಸ್ಟ್ ನಲ್ಲಿ ಕಾಂಗ್ರೆಸ್ ಶಾಸಕ ಸುಬಲ್ ಸಾಹು ಮೃತಪಟ್ಟ ನಂತರ ಬಿಜೆಪುರ್ ವಿಧಾನಸಭಾ ಸ್ಥಾನವು ತೆರವಾಗಿತ್ತು. ಫೆ.24ರಂದು ಇಲ್ಲಿ ಚುನಾವಣೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News