ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿಯ ಮಹತ್ವದ ಜಿಗಿತ

Update: 2018-02-28 14:12 GMT

ಹೊಸದಿಲ್ಲಿ,ಫೆ.28: ಭಾರತದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ವು ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ.7.2ಕ್ಕೆ ಜಿಗಿಯುವ ಮೂಲಕ ಈ ವರ್ಷದ ಅತ್ಯಂತ ವೇಗದ ತ್ರೈಮಾಸಿಕ ಬೆಳವಣಿಗೆಯನ್ನು ದಾಖಲಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ.6.5ರಷ್ಟಿದ್ದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.6.5ರಷ್ಟಿತ್ತು. ಸೇವಾ ಕ್ಷೇತ್ರಗಳು ಹೆಚ್ಚು ಚುರುಕಾಗಿರುವುದು ಈ ಸಾಧನೆಗೆ ಮುಖ್ಯ ಕಾರಣವಾಗಿದೆ.

 ಕೇಂದ್ರ ಅಂಕಿಅಂಶ ಕಚೇರಿಯು ಬುಧವಾರ ಬಿಡುಗಡೆಗೊಳಿಸಿರುವ ಎರಡನೇ ಮುಂಗಡ ಅಂದಾಜಿನಂತೆ 2017-18ನೇ ಸಾಲಿನ ಒಟ್ಟಾರೆ ಜಿಡಿಪಿ ಬೆಳವಣಿಗೆ ದರವು ಶೇ.6.6ರಷ್ಟಾಗಲಿದೆ. ಕಳೆದ ತಿಂಗಳು ಬಿಡುಗಡೆಗೊಳಿಸಲಾಗಿದ್ದ ಮೊದಲ ಅಂದಾಜಿನಲ್ಲಿ ಇದು ಶೇ.6.5ರಷ್ಟಾಗಬಹುದು ಎಂದು ಲೆಕ್ಕ ಹಾಕಲಾಗಿತ್ತು.

ಇದೇ ವೇಳೆಗೆ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಜಿಡಿಪಿ ಬೆಳವಣಿಗೆಯನ್ನು ಮೊದಲಿನ ಅಂದಾಜು ಶೇ.6.3ರಿಂದ ಶೇ.6.5ಕ್ಕೆ ಪರಿಷ್ಕರಿಸಲಾಗಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಶೇ.7.1 ಜಿಡಿಪಿ ಬೆಳವಣಿಗೆ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News