ತ್ರಿಪುರಾ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ

Update: 2018-03-03 12:38 GMT

ಹೊಸದಿಲ್ಲಿ,ಮಾ.3: ಈಶಾನ್ಯ ರಾಜ್ಯಗಳ ಮೂರು ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷ ತ್ರಿಪುರಾದಲ್ಲಿ ಎಡರಂಗ ಸರಕಾರವನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದು, ಸ್ಪಷ್ಟ ಬಹುಮತ ಗಳಿಸುವತ್ತ ಮುನ್ನುಗ್ಗಿದೆ.

 ಮೇಘಾಲಯದಲ್ಲಿ  ಬಿಜೆಪಿಗೆ ದೊಡ್ಡ ಮೊತ್ತದ ಯಶಸ್ಸು ಸಿಕ್ಕಿಲ್ಲ.  ಹೀಗಿದ್ದರೂ 2 ಸ್ಥಾನ ಗೆಲ್ಲುವ ಕಡೆಗೆ ಹೆಜ್ಜೆ ಇರಿಸಿದೆ. ಆಡಳಿತಾರೂಢ ಕಾಂಗ್ರೆಸ್ ಸ್ಪಷ್ಟ  ಬಹುಮತ  ಪಡೆಯುವಲ್ಲಿ ಎಡವಿದೆ.

 ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಕಳೆದ ಚುನಾವಣೆಯಲ್ಲಿ 1 ಸ್ಥಾನ ಗಳಿಸಿತ್ತು. ಆದರೆ ಈ ಬಾರಿ ಬಿಜೆಪಿ ಮೈತ್ರಿಕೂಟ 30 ಸ್ಥಾನ ಹಿಡಿಯುವ ಹಾದಿಯಲ್ಲಿದೆ.  ಕಳೆದ ಚುನಾವಣೆಯಲ್ಲಿ 8 ಸ್ಥಾನ ಪಡೆದಿದ್ದ ಕಾಂಗ್ರೆಸ್ ಶೂನ್ಯ ಸಂಪಾದನೆಯ ಭೀತಿ ಎದುರಿಸುತ್ತಿದೆ.

ನಾಗಾಲ್ಯಾಂಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ರಿಯೊ ನೇತೃತ್ವದ ಎನ್‌ಡಿಪಿಪಿಯೊಂದಿಗೆ ಬಿಜೆಪಿಯು ಮೈತ್ರಿ ಮಾಡಿಕೊಂಡಿದೆ. ಅದು 20 ಕ್ಷೇತ್ರಗಳಲ್ಲಿ ಮತ್ತು ಎನ್‌ಡಿಪಿಪಿ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಕಾಂಗ್ರೆಸ್ ಕೇವಲ 18 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಆಡಳಿತಾರೂಢ  ಎನ್ ಪಿಎಫ್ ಅಧಿಕಾರ ಕಳೆದುಕೊಳ್ಳುವುದು ಖಚಿತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News