ಶೂಟಿಂಗ್ ವಿಶ್ವಕಪ್: ಮನು ಭಾಕರ್‌ಗೆ ಮತ್ತೊಂದು ಬಂಗಾರ

Update: 2018-03-06 05:47 GMT

ಮೆಕ್ಸಿಕೊ, ಮಾ.6: ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತದ 16ರ ಹರೆಯದ ಶೂಟರ್ ಮನು ಭಾಕರ್ ಅವರು ಮತ್ತೊಂದು ಚಿನ್ನದ ಪದಕ ಜಯಿಸಿದ್ದಾರೆ.

ಮನು ಸೋಮವಾರ ನಡೆದ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಓಂ ಪ್ರಕಾಶ್ ಮಿಥಾರ್ವಲ್ ಜೊತೆಗೂಡಿ ಚಿನ್ನದ ಪದಕ ಜಯಿಸಿದರು.

ಫೈನಲ್ ರೌಂಡ್‌ನಲ್ಲಿ ಮನು-ಪ್ರಕಾಶ್ ಜೋಡಿ ಒಟ್ಟು 476.1 ಅಂಕ ಗಳಿಸಿ ಮೊದಲ ಸ್ಥಾನ ಪಡೆಯಿತು. ಈ ಮೂಲಕ ಭಾರತ ಟೂರ್ನಿಯಲ್ಲಿ ಮೂರನೇ ಚಿನ್ನ ಬಾಚಿಕೊಂಡಿತು.

ಭಾರತ ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು ಏಳು ಪದಕಗಳನ್ನು ಜಯಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ಜರ್ಮನಿಯ ಸಾಂಡ್ರಾ ಹಾಗೂ ಕ್ರಿಸ್ಟಿಯನ್ ರೆಟ್ಝ್ 475.2 ಅಂಕ ಗಳಿಸಿ ಬೆಳ್ಳಿ ಜಯಿಸಿದರು. ಒಟ್ಟು 415.1 ಅಂಕ ಗಳಿಸಿರುವ ಫ್ರಾನ್ಸ್‌ನ ಸೆಲಿನ್ ಹಾಗೂ ಫ್ಲೊರಿನ್ ಕಂಚು ಜಯಿಸಿದ್ದಾರೆ.

 ಭಾರತ 10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಇವೆಂಟ್‌ನಲ್ಲಿ ಕಂಚು ಜಯಿಸಿದೆ. ಮೆಹುಲಿ ಘೋಷ್ ಹಾಗೂ ದೀಪಕ್ ಕುಮಾರ್ ಒಟ್ಟು 435.1 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು.

ವಿಶ್ವ ದಾಖಲೆಯ ಸ್ಕೋರ್(502) ಗಳಿಸಿದ ಚೀನಾದ ಜೋಡಿ ಕ್ಸೂಹಾಂಗ್ ಹಾಗೂ ಚೆನ್ ಕೆಡು ಚಿನ್ನ ಜಯಿಸಿದ್ದಾರೆ. ರೊಮಾನಿಯದ ಕಾಮನ್ ಲೌರಾ ಹಾಗೂ ಮೊಲ್ಡೊವೆನು ಅಲಿನ್ ಜಾರ್ಜ್(498.4) ಕಂಚು ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News