ಸೆರೆನಾ ಶುಭಾರಂಭ

Update: 2018-03-09 18:43 GMT

ಇಂಡಿಯನ್ ವೆಲ್ಸ್, ಮಾ.9: ಅಮೆರಿಕದ ಸೆರೆನಾ ವಿಲಿಯಮ್ಸ್ ಡಬ್ಲುಟಿಎ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಸೆರೆನಾ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಝರಿನಾ ಡಿಯಾಸ್‌ರನ್ನು 7-5, 6-3 ಸೆಟ್‌ಗಳ ಅಂತರದಿಂದ ಮಣಿಸಿದರು. 2017ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಚಾಂಪಿಯನ್ ಆದ ಬಳಿಕ ಮೊದಲ ಬಾರಿ ಟೆನಿಸ್ ಅಂಗಣಕ್ಕೆ ಇಳಿದ ಸೆರೆನಾಗೆ ಅವರ ಅಭಿಮಾನಿಗಳು ಎದ್ದು ನಿಂತು ಸ್ವಾಗತ ನೀಡಿದರು. ಸೆರೆನಾ ಮೂರನೇ ಬಾರಿ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಆಡುತ್ತಿದ್ದಾರೆ.

36ರ ಹರೆಯದ ಸೆರೆನಾ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ತಾರಾಕರ್ಷಣೆಯಾಗಿದ್ದಾರೆ. ಗುರುವಾರ ಅತ್ಯುತ್ತಮ ಪ್ರದರ್ಶನ ನೀಡಿದ 23 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಸೆರೆನಾ ತನ್ನ ಮ್ಯಾಚ್ ಫಿಟ್‌ನೆಸ್ ಬಗ್ಗೆ ಇದ್ದ ಎಲ್ಲ ರಹಸ್ಯಕ್ಕೆ ತೆರೆ ಎಳೆದರು.

ಸೆರೆನಾ ಎರಡನೇ ಸುತ್ತಿನಲ್ಲಿ 29ನೇ ಶ್ರೇಯಾಂಕದ ಕಿಕಿ ಬೆರ್ಟೆನ್ಸ್‌ರನ್ನು ಎದುರಿಸಲಿದ್ದಾರೆ. ಸೆರೆನಾ ಅವರು ಬೆರ್ಟೆನ್ಸ್ ವಿರುದ್ಧ ಜಯ ಸಾಧಿಸಿದರೆ ಮೂರನೇ ಸುತ್ತಿನಲ್ಲಿ ಹಿರಿಯ ಸಹೋದರಿ ವೀನಸ್ ವಿಲಿಯಮ್ಸ್‌ರನ್ನು ಎದುರಿಸುವ ಸಾಧ್ಯತೆಯಿದೆ.

8ನೇ ಶ್ರೇಯಾಂಕದ ವೀನಸ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದು, ಮುಂದಿನ ಸುತ್ತಿನಲ್ಲಿ ರೊಮಾನಿಯದ ಸೊರಾರ ಸಿರ್ಸ್ಟಿ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News