ಯುದ್ಧ ಸಾಮಗ್ರಿ ಖರೀದಿಗೆ ಹಣದ ಕೊರತೆಯಿದೆ: ಸೇನೆ

Update: 2018-03-13 16:54 GMT

ಹೊಸದಿಲ್ಲಿ, ಮಾ. 13: ಪಠಾಣ್‌ಕೋಟ್ ಹಾಗೂ ಉರಿ ಭಯೋತ್ಪಾದಕ ದಾಳಿಯ ಬಳಿಕ ತುರ್ತು ಯುದ್ಧ ಸಾಮಗ್ರಿ ಖರೀದಿಗೆ ಹಾಗೂ ಚೀನಾ ಗಡಿಯಲ್ಲಿ ರಸ್ತೆ ನಿರ್ಮಿಸಲು ಸಾಕಷ್ಟು ಹಣವಿಲ್ಲ ಎಂದು ಹೇಳುವ ಮೂಲಕ ಸೇನೆ ತನ್ನ ಹಣಕಾಸು ಸ್ಥಿತಿಗತಿ ಬಗ್ಗೆ ಬೆಚ್ಚಿಬೀಳಿಸುವ ಚಿತ್ರಣ ನೀಡಿದೆ.  ಹಣದ ಕೊರತೆ ತನ್ನ ಸಾಮರ್ಥ್ಯ ಕುಂಠಿತಗೊಳ್ಳಲು ಕಾರಣವಾಗುತ್ತಿರುವ ಬಗ್ಗೆ ಎಚ್ಚರಿಸುತ್ತಾ ಸೇನೆ, ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಯುದ್ಧದ ಬೆದರಿಕೆ ವಾಸ್ತವವಾಗಿದ್ದು, ಸೇನೆಯ ಆಧುನೀಕರಣ ಹಾಗೂ ಶಸ್ತ್ರಾಸ್ತ್ರ ಸಾಮರ್ಥ್ಯದ ಕೊರತೆ ನೀಗಿಸುವ ಬಗ್ಗೆ ಗಮನಹರಿಸಬೇಕು ಎಂದು ಸಂಸದೀಯ ಸಮಿತಿಗೆ ತಿಳಿಸಿತು.

ಈಗ ನಡೆಯುತ್ತಿರುವ 125 ಯೋಜನೆಗಳಿಗೆ ಹಾಗೂ ತುರ್ತು ಸಶ್ತ್ರಾಸ್ತ್ರ ಹೊಂದುವುದಕ್ಕೆ 29,033 ಕೋ. ರೂ. ಪಾವತಿ ಮಾಡಬೇಕಿತ್ತು. ಆದರೆ, ಮಂಜೂರು ಮಾಡಲಾದ 21,338 ಕೋ. ರೂ. ಯಾವುದಕ್ಕೂ ಸಾಕಾಗುವುದಿಲ್ಲ. 10 ದಿನಗಳ ಕಾಲ ತೀವ್ರ ಯುದ್ಧ ನಡೆದರೆ ಯುದ್ಧ ಸಾಮಾಗ್ರಿ ಸಂಗ್ರಹಿಸಲು 6,380 ಕೋ. ರೂ. ಕೊರತೆ ಬೀಳುತ್ತದೆ ಎಂದು ಸಂಸತ್ತಿಗೆ ಮಂಗಳವಾರ ಸಲ್ಲಿಸಲಾದ ಸರಣಿ ವರದಿ ಹೇಳಿದೆ.

2018-19ರ ಬಜೆಟ್ ನಮ್ಮ ನಿರೀಕ್ಷೆ ಹುಸಿಗೊಳಿಸಿದೆ. ನಾವೇನು ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಿದ್ದೆವೆಯೋ ಅಲ್ಲಿ ವಾಸ್ತವವಾಗಿ ಸ್ಪಲ್ಪ ಮಟ್ಟಿನ ಹಿನ್ನಡೆ ಉಂಟಾಗಿದೆ. ಬಜೆಟ್ ಅಂದಾಜಿನ ಅಲ್ಪ ಮಟ್ಟದ ಹೆಚ್ಚಳ ಹಣದುಬ್ಬರ ಹಾಗೂ ತೆರಿಗೆ ಕಟ್ಟುವುದನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎಂದು ಸೇನೆಯ ಉಪ ವರಿಷ್ಠ ಲೆಫ್ಟಿನೆಂಟ್ ಜನರಲ್ ಶರತ್ ಚಂದ್ ಸಮಿತಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News