ಸೋನಿಯಾ ಗಾಂಧಿಯ ಡಿನ್ನರ್ ಮೈತ್ರಿಕೂಟದಲ್ಲಿ ಯಾರ್ಯಾರು ಭಾಗವಹಿಸಿದ್ದರು ನೋಡಿ

Update: 2018-03-13 17:14 GMT

ಹೊಸದಿಲ್ಲಿ,  ಮಾ.13: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಏರ್ಪಡಿಸಿದ್ದ ಡಿನ್ನರ್ ಒಂದರಲ್ಲಿ 20 ವಿಪಕ್ಷಗಳ ನಾಯಕರು ಭಾಗವಹಿಸಿ ಗಮನ ಸೆಳೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವುದು ಹೇಗೆ ಎನ್ನುವ ಬಗೆಗಿನ ಚರ್ಚೆಗೆ ಈ ಡಿನ್ನರ್ ಪ್ರಮುಖ ವೇದಿಕೆ ಎನ್ನಲಾಗಿದೆ.

ಎನ್ ಸಿಪಿ, ಆರ್ ಜೆಡಿ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಾರ್ಟಿ, ತೃಣಮೂಲ ಕಾಂಗ್ರೆಸ್, ಡಿಎಂಕೆ ಸೇರಿದಂತೆ ಸುಮಾರು 20 ಪಕ್ಷಗಳ ನಾಯಕರು ಡಿನ್ನರ್ ನಲ್ಲಿ ಪಾಲ್ಗೊಂಡಿದ್ದರು.

ಎನ್ ಸಿಪಿಯ ಶರದ್ ಪವಾರ್, ಎಸ್ಪಿಯ ರಾಮ್ ಗೋಪಾಲ್ ಯಾದವ್, ಬಿಎಸ್ ಪಿಯ ಸತೀಶ್ ಚಂದ್ರ ಮಿಶ್ರಾ ಹಾಗು ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ದುಲ್ಲಾ, ಬಾಬುಲಾಲ್ ಮರಾಂದಿ, ಹೇಮಂತ್ ಸೊರೇನ್ ಹಾಗು ಜಿತೇನ್ ರಾಮ್ ಮಾಂಝಿ, ಜೆಡಿಯುನ ಶರದ್ ಪವಾರ್, ಆರ್ ಜೆಡಿಯ ಅಜಿತ್ ಸಿಂಗ್ ಭಾಗವಹಿಸಿದ್ದವರಲ್ಲಿ ಪ್ರಮುಖರು.

ಆರ್ ಜೆಡಿಯಿಂದ ಲಾಲು ಅವರ ಇಬ್ಬರು ಮಕ್ಕಳಾದ ತೇಜಸ್ವಿ ಯಾದವ್ ಹಾಗು ಮಿಸಾ ಭಾರ್ತಿ ಭಾಗವಹಿಸಿದ್ದರು. ಟಿಎಂಸಿಯ ಸುದೀಪ್ ಬಂದ್ಯೋಪಾಧ್ಯಾಯ, ಸಿಪಿಎಂನ ಡಿ. ರಾಜಾ ಹಾಗು ಮುಹಮ್ಮದ್ ಸಲೀಂ, ಡಿಎಂಕೆ ಕನಿಮೊಳಿ, ಎಐಯುಡಿಎಫ್ ನ ಬದ್ರುದ್ದೀನ್ ಅಜ್ಮಲ್ ಮೊದಲಾದವರು ಭಾಗವಹಿಸಿದ್ದರು.

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಗುಲಾಮ್ ನಬಿ ಆಝಾದ್, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್, ಎ.ಕೆ. ಆ್ಯಂಟನಿ ಹಾಗು ರಣ್ ದೀಪ್ ಸುರ್ಜೇವಾಲಾ ಡಿನ್ನರ್ ನಲ್ಲಿದ್ದರು.

ತೆಲುಗು ದೇಶಂ ಪಾರ್ಟಿ, ಬಿಜೆಡಿ ಹಾಗು ಟಿಆರ್ ಎಸ್ ಗೆ ಆಮಂತ್ರಣ ಇರಲಿಲ್ಲ ಎನ್ನಲಾಗಿದೆ. ಒಂದೇ ವೇದಿಕೆಯ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವುದು ಹೇಗೆ ಎನ್ನುವ ಕುರಿತು ಈ ಸಂದರ್ಭ ಚರ್ಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News