ಮಂಡ್ಯ: ಅಬಕಾರಿ ಇಲಾಖೆಯಿಂದ ಸಾವಿರಾರು ಲೀಟರ್ ಅಕ್ರಮ ಮದ್ಯ ನಾಶ

Update: 2018-03-14 17:26 GMT

ಮಂಡ್ಯ, ಮಾ.14: ವಶಪಡಿಸಿಕೊಂಡಿದ್ದ ಸಾವಿರಾರು ಲೀಟರ್ ಅಕ್ರಮ ಮದ್ಯವನ್ನು ನಗರದ ಮೈಷುಗರ್ ಸಮೀಪದ ಹೆಬ್ಬಳ್ಳ ಬಳಿಯ ಆವರಣದಲ್ಲಿ ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿಗಳು ಬುಧವಾರ ನಾಶಪಡಿಸಿದರು.

ಮಂಡ್ಯ ವಲಯ ವ್ಯಾಪ್ತಿಯಲ್ಲಿ 2011-12ರಿಂದ 2016-17ರ ವರೆಗರ ದಾಖಲಾಗಿರುವ ಒಟ್ಟು 788 15(ಎ) ಪ್ರಕರಣಗಳು ಮತ್ತು 131 ಘೋರ ಪ್ರಕರಣಗಳಿಂದ ಒಟ್ಟು 1816.185 ಲೀ.ಮದ್ಯ ಮತ್ತು 87.030 ಲೀ.ಬಿಯರ್ ಹಾಗೂ 175 ಲೀಟರ್ ಅಕ್ರಮ ಮದ್ಯಸಾರವನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಪೈಕಿ ರಾಸಾನಿಕ ವಿಶ್ಲೇಷಣೆಗೆ ಮಾದರಿ ತೆಗೆದ 157.160 ಲೀಟರ್ ಮದ್ಯ, 5.590 ಲೀಟರ್ ಬಿಯರ್ ಹಾಗೂ 500 ಲೀಟರ್ ಮದ್ಯಸಾರ ಹೊರತುಪಡಿಸಿ ಉಳಿಕೆ 1659.025 ಲೀಟರ್ ಮದ್ಯ, 81.440 ಲೀಟರ್ ಬಿಯರ್, 174.500 ಲೀಟರ್ ಮದ್ಯಸಾರವನ್ನು ನಾಶಪಡಿಸಲಾಯಿತು.

ಕೆಎಸ್‍ಬಿಸಿಎಲ್‍ನ ಲೋಕೇಶಪ್ಪ, ಕಂದಾಯ ಇಲಾಖೆಯ ಕಿಶೋರ್, ಅಬಕಾರಿ ಉಪ ಅಧೀಕ್ಷಕ ವಿಕ್ರಮ್, ಅಬಕಾರಿ ನಿರೀಕ್ಷಕಿ ಕಾಮಾಕ್ಷಿ ಉತ್ತಯ್ಯ, ಉಪನಿರೀಕ್ಷಕ ವೆಂಕಟೇಶ್, ಬೋರಯ್ಯ, ಪಿಎಸ್ಸೈ ಸಂತೋಷ್‍ಕುಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News