ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 12 ವರ್ಷ ಜೈಲು ಶಿಕ್ಷೆ

Update: 2018-03-15 15:38 GMT

ಮೈಸೂರು,ಮಾ.15: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿದ ಆರೋಪಿಗೆ ಮೈಸೂರಿನ ಫೋಕ್ಸೋ ನಾಯಾಲಯ 12 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಅಪಹರಣಕ್ಕೆ 2 ವರ್ಷ, ಅತ್ಯಾಚಾರಕ್ಕೆ 10 ವರ್ಷ ಸೇರಿ 12 ವರ್ಷ ಜೈಲು ಶಿಕ್ಷೆಗೆ ಒಳಗಾದ ಆರೋಪಿಯನ್ನು ಪಿರಿಯಾಪಟ್ಟಣ ಆವರ್ತಿ ದಿನೇಶ್(23) ಎಂದು ತಿಳಿದು ಬಂದಿದೆ.

2014 ರ ಏಪ್ರಿಲ್ ನಲ್ಲಿ ಆವರ್ತಿ ದಿನೇಶ್ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಸ್ನೇಹಿತನ ಮನೆಯಲ್ಲಿಟ್ಟಿದ್ದ. ಆರೋಪಿಗೆ ಸಹಾಯ ಮಾಡಿದ ದಿನೇಶ್ ಸ್ನೇಹಿತ ಶಶಿಧರ್ ನಾಪತ್ತೆಯಾಗಿದ್ದಾನೆ.  ಮೈಸೂರಿನ ಫೋಕ್ಸೋ ನಾಯಾಲಯದ ನ್ಯಾಯಾಧೀಶ ವಿ.ಎಂ.ಪಾವಲೆ 12 ವರ್ಷ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದು, ಸರ್ಕಾರದ ಪರವಾಗಿ ವಕೀಲ ಶಿವರುದ್ರಸ್ವಾಮಿ ವಾದ ಮಂಡಿಸಿದ್ದರು.

ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News