ಜನರ ಹಕ್ಕುಗಳಿಗಾಗಿ ಜನರ ಧ್ವನಿಯಾಗುವುದೇ ನನ್ನ ಮೊದಲ ಆದ್ಯತೆ: ಅಬ್ದುಲ್ ಮಜೀದ್

Update: 2018-03-20 11:51 GMT

ಮೈಸೂರು, ಮಾ. 20: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಮೈಸೂರು, ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅಬ್ದುಲ್ ಮಜೀದ್ ಜನರ ಅಹವಾಲುಗಳನ್ನು ಆಲಿಸುವ ನಿಟ್ಟಿನಲ್ಲಿ ಸುಮಾರು ತಿಂಗಳಿನಿಂದ ನಡೆಸುತ್ತಿರುವ 'ವಾಕ್ ಟು ವಾರ್ಡ್' ಅಭಿಯಾನದ ಭಾಗವಾಗಿ ಇಂದು (20-.3-2018) ಇಲ್ಲಿನ ವಾರ್ಡ್ ನಂ.42ರಲ್ಲಿ ಪಾದಯಾತ್ರೆ ಕೈಗೊಂಡು ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, 'ಜನರ ಹಕ್ಕುಗಳಿಗಾಗಿ ಜನರ ಧ್ವನಿಯಾಗುವುದೇ ನನ್ನ ಮೊದಲ ಆದ್ಯತೆ' ಎಂದು ಹೇಳಿದರು.

ನರಸಿಂಹರಾಜ ಕ್ಷೇತ್ರ ಕಳೆದ 7  ದಶಕಗಳಿಂದ ಕರ್ನಾಟಕ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದ್ದು, ಮೂಲಭೂತ ಹಕ್ಕುಗಳಿಂದ ಕ್ಷೇತ್ರದ ಜನತೆ ವಂಚಿತರಾಗಿರುವ ಬಗ್ಗೆ ಖೇಧ ವ್ಯಕ್ತಪಡಿಸುತ್ತಾ, ಜನರಿಂದ ಆಯ್ಕೆಗೊಂಡ ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಬಿಟ್ಟು ನೈಜ ಜನಸೇವಕನಾಗಬೇಕಾಗಿದೆ ಎಂದು ಹೇಳಿದರು.

ಸುಮಾರು 3.5 ಲಕ್ಷ ಜನಸಂಖ್ಯೆ ಇರುವ ಈ ಕ್ಷೇತ್ರದಲ್ಲಿ 80 ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಆದರೆ ಅವರು ಮೂಲಭೂತ ಹಕ್ಕುಗಳಿಂದ ವಂಚಿತರಾಗಿರುವುದು ವಿಪರ್ಯಾಸವೇ ಸರಿ. ಈ ಕ್ಷೇತ್ರದ ಎಲ್ಲ ಜನತೆಗೂ ನ್ಯಾಯಯುತವಾದ ಹಕ್ಕನ್ನು ಕೊಡಿಸುವುದು ಮತ್ತು ನ್ಯಾಯದ ಪರ ಕ್ಷೇತ್ರದ ಜನರ ಪರ ಧ್ವನಿಯಾಗುವುದು ನನ್ನ ಕನಸಾಗಿದೆ ಎಂದು ಅಬ್ದುಲ್ ಮಜೀದ್ ಹೇಳಿದರು. 

ಈ ಸಂದರ್ಭ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದಲು ಲತೀಫ್, ನಗರಾಧ್ಯಕ್ಷ ಅಝಾಂ ಪಾಶ, ಕಾರ್ಯದರ್ಶಿ ಕೌಶನ್ ಬೇಗ್, ಅಲೂರ್ ಮಲ್ಲಣ್ಣ, ಎಸ್.ಸ್ವಾಮಿ, ಮಹಾದೇವ್, ಅಕ್ರಂ ಶರೀಫ್,  ವಾರ್ಡ್ 42 & 42ರ ಪದಾಧಿಕಾರಿಗಳು, ಬೆಂಬಲಿಗರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 

ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಎಸ್.ಡಿ.ಪಿ.ಐ ಯನ್ನು ಕ್ಷೇತ್ರದ ಸರ್ವತೋಮುಖ ಬದಲಾವಣೆಗಾಗಿ ಜನತೆ ಸ್ವೀಕರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News