ತಿ.ನರಸೀಪುರ: ನದಿಯಲ್ಲಿ ಮುಳುಗಿ ಇಬ್ಬರ ಸಾವು

Update: 2018-03-20 18:16 GMT

ತಿ.ನರಸೀಪುರ, ಮಾ.20: ತ್ರಿವೇಣಿ ಸಂಗಮದ ಒಡಲಿಗೆ ಸಿಲುಕಿ ಬಲಿಯಾದ ಇಬ್ಬರು ಯುವಕರ ದಾರುಣ ಸಾವಿಗೆ ತಾಲೂಕು ಆಡಳಿತದ ನಿರ್ಲಕ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುಗಾದಿ ಹಬ್ಬದ ಪ್ರಯುಕ್ತ ಪುಣ್ಯ ಸ್ನಾನ ಮಾಡಲು ಪಟ್ಟಣದ ಕಾವೇರಿ ಕಪಿಲ ಸಂಗಮಕ್ಕೆ ಬಂದಿದ್ದ ಬನ್ನಹಳ್ಳಿ ಹುಂಡಿ ಗ್ರಾಮದ ಬಿಎಸ್ಪಿ ಮುಖಂಡ ಪುಟ್ಟಸ್ವಾಮಿಯವರ ಪುತ್ರ ತೇಜೇಂದ್ರ ಪ್ರಸಾದ್(17)ವರ್ಷ, ಅದೇ ಗ್ರಾಮದ ಪ್ರಮೋದ್(12) ವರ್ಷ, ಇಬ್ಬರು ಮಕ್ಕಳು ನದಿಯಲ್ಲಿ ಮುಳುಗಿ ಸಾವನ್ನಪಿರುವುದು ವರದಿಯಾಗಿದೆ.

ಗುಂಜಾನರಸಿಂಹಸ್ವಾಮಿ ದೇವಾಲಯ ಹಾಗೂ ಅಗಸ್ತ್ಯ ಮುನಿಗಳು ಸ್ಥಾಪಿಸಿದ ಶಿವನ ದೇವಾಲಯದ ಹಂಚಿನಲ್ಲಿ ಹರಿಯುವ ಕಾವೇರಿ ಕಪಿಲ ನದಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿದ ಪರಿಣಾಮ ನದಿಯ ತಪ್ಪಲಿನಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿ ಕೆಸರಿನಿಂದ ಕೂಡಿದ್ದು, ಇದನ್ನರಿಯದ ಮುಗ್ಧ ಬಾಲಕರು ನದಿಗೆ ಇಳಿದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ನದಿಯಲ್ಲಿ ಮುಳುಗಿದ ಶವಕ್ಕಾಗಿ ನುರಿತ ಈಜುಗಾರರು 1 ಗಂಟೆಗೂ ಹೆಚ್ಚುಕಾಲ ಶೋಧ ನಡೆಸಿದ್ದರು. ಪ್ರಮೋದ್ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ತೇಜೇಂದ್ರ ಪ್ರಸಾದ್ ನೀರು ಕುಡಿದು ನಿತ್ರಾಣಗೊಂಡಿದ್ದ ಹೆಚ್ಚಿನ ಚಿಕ್ಸಿತೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕ್ಸಿತೆ ಫಲಕಾರಿಯಾಗದೆ ಆತನು ಕೂಡ ಸಾವನ್ನಪಪಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಸಾರ್ವಜನಿಕರು ತಾಲೂಕು ಆಡಳಿತದ ವಿರುದ್ಧ ಆಕ್ರೋಶಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News