ಮತವನ್ನು ವಿವೇಚನೆಯಿಂದ ಬಳಸಿ

Update: 2018-03-20 18:46 GMT

ಮಾನ್ಯರೇ,

ಶತಮಾನಗಳ ಕಾಲ ಹೋರಾಟ ನಡೆಸಿ ಪಡೆದುಕೊಂಡ ನಮ್ಮ ಭಾರತದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಶತಮಾನ ಕಳೆಯುವ ಮೊದಲೇ ಬುಡಮೇಲಾಗುವ ಪರಿಸ್ಥಿತಿಯಲ್ಲಿದೆ. ಸಾಮಾಜಿಕ ವೌಲ್ಯಗಳು ನೆಲಕಚ್ಚಿ ಮಣ್ಣುಪಾಲಾಗಿವೆ. ನಮ್ಮ ಇತಿಹಾಸ ಮತ್ತು ಪ್ರಚಲಿತ ವಿದ್ಯಮಾನ ಇವೆರಡನ್ನು ತುಲನಾತ್ಮಕವಾಗಿ ನೋಡಿದರೆ ದೇಶದ ಈಗಿನ ಆಡಳಿತಕ್ಕಿಂತ ಬ್ರಿಟಿಷ್ ಆಡಳಿತವೇ ಸೂಕ್ತವಾಗಿತ್ತು ಎಂದೆನಿಸುತ್ತದೆ.

ಎಲ್ಲಿಯವರೆಗೆ ಮತದಾರರು ಯಾವುದೇ ಆಮಿಷಗಳಿಗೆ, ಓಲೈಕೆಗಳಿಗೆ ಬಲಿಯಾಗದೆ ಗುಪ್ತ ಮತದಾನದ ಪ್ರಕ್ರಿಯೆಯಲ್ಲಿ ತಮ್ಮ ಜಾಣತನವನ್ನು ತೋರಿಸುವರೋ ಅಲ್ಲಿಯ ವರೆಗೆ ಪ್ರಜಾಪ್ರಭುತ್ವಕ್ಕೆ ಘನತೆ, ಗೌರವ ಇರುತ್ತದೆ. ಇಲ್ಲವಾದಲ್ಲಿ ಪ್ರಜಾಪ್ರಭುತ್ವದ ನೆಪದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ.

ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳಾದ ನಮಗಿರುವ ಏಕೈಕ ಅಸ್ತ್ರವಾದ ‘ಮತದಾನ’ವನ್ನು ಮುಂಬರುವ ಚುನಾವಣೆಗಳಲ್ಲಿ ವಿವೇಚನೆಯಿಂದ ಬಳಸಿ, ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ನೀಡಿದ ವಿಶ್ವಶ್ರೇಷ್ಠ ಮನ್ನಣೆ ಪಡೆದಿರುವ ನಮ್ಮ ಸಂವಿಧಾನದ ಘನತೆ, ಗೌರವವನ್ನು ಕಾಪಾಡಬೇಕಾಗಿದೆ.

-ಪ್ರಕಾಶ್ ಗೌಡ, ಪುತ್ತೂರು

Writer - -ಪ್ರಕಾಶ್ ಗೌಡ, ಪುತ್ತೂರು

contributor

Editor - -ಪ್ರಕಾಶ್ ಗೌಡ, ಪುತ್ತೂರು

contributor

Similar News