ಜಾತಿ-ಬಡತನಗಳ ಕುರಿತಂತೆ ಶಾಸ್ತ್ರೀಯ ಅಧ್ಯಯನ

Update: 2018-03-20 18:46 GMT

ಭಾರತದಲ್ಲಿ ನಿರ್ದಿಷ್ಟ ಸಮುದಾಯಗಳ ಸಾಮಾಜಿಕ ಸಂಬಂಧಗಳ ಸುತ್ತಲೂ ಮತ್ತು ಸಂಸ್ಥೆೆಗಳು ಜಾತಿ ಮತ್ತು ಜನಾಂಗದ ಆಧಾರದ ಮೇಲೆ ನಿರ್ದಿಷ್ಟ ಸಮುದಾಯಗಳ ವಿರುದ್ಧ ಆಚರಿಸುವ ಪ್ರತ್ಯೇಕತೆ, ತಾರತಮ್ಯ, ಮೂಲೆಗುಂಪು ನೀತಿಗಳ ಸುತ್ತಲೇ ಪ್ರತ್ಯೇಕತೆಯು ಪರಿಭ್ರಮಿಸುತ್ತದೆ. ಜಾತಿ ಪದ್ಧತಿಯ ಸುತ್ತಲೂ ಪರಿಭ್ರಮಿಸುವ ಪ್ರತ್ಯೇಕತೆಯ ಗುಣಗಳನ್ನು ಅರಿತುಕೊಳ್ಳುವ ಭಾಗವಾಗಿ ಸುಖದೇವ್ ಥೋರಟ್ ‘ಜಾತಿ’ ಎನ್ನುವ ಕಿರು ಕೃತಿಯನ್ನು ಬರೆದಿದ್ದಾರೆ. ಸಾಮಾಜಿಕ ಪ್ರತ್ಯೇಕತೆ ಮತ್ತು ಅದಕ್ಕೆ ಜೋತುಕೊಂಡಿರುವ ಬಡತನ ಇವುಗಳನ್ನು ಸಮಾಜೋ ವಿಜ್ಞಾನದ ತಳಹದಿಯಲ್ಲಿ ಚರ್ಚಿಸಿದ್ದಾರೆ. ಈ ಪ್ರಬಂಧವು ಇಂಡಿಯಾದ ವ್ಯವಸ್ಥೆಯಲ್ಲಿ ಅವಕಾಶ ವಂಚಿತ ತಳಸಮುದಾಯಗಳ ಮೇಲೆ ನಡೆಸಲಾಗುತ್ತಿರುವ ‘ಪ್ರತ್ಯೇಕತೆಯನ್ನು ಒಳಗೊಂಡ ದಬ್ಬಾಳಿಕೆ’ಗಳ ಸ್ವರೂಪ ಮತ್ತು ವಿವಿಧ ಆಯಾಮಗಳನ್ನು ಪರಿಕಲ್ಪಿತಗೊಳಿಸಿದೆ. ಜಾತಿ ಆಧಾರಿತ ಪ್ರತ್ಯೇಕತೆ ಮತ್ತು ಅವಕಾಶ ವಂಚಿತ ತಳ ಸಮುದಾಯಗಳ ಬಡತನದ ಮೇಲೆ ಅದರ ಪರಿಣಾಮಗಳ ಕುರಿತ ಪರಿಕಲ್ಪನೆ ಮತ್ತು ಅರ್ಥಗಳನ್ನು ಇದೇ ಪ್ರಕ್ರಿಯೆಯಲ್ಲಿ ವಿಸ್ತಾರವಾಗಿ ಚರ್ಚಿಸಲಾಗಿದೆ. ಎರಡನೆಯದಾಗಿ ಮೇಲಿನ ಈ ಸಿದ್ಧಾಂತದ ಹಿನ್ನೆಲೆಯಲ್ಲಿ ಜಾತಿ ಆಧಾರಿತ ಪ್ರತ್ಯೇಕತೆಯ ಆಚರಣೆಗಳು ಸಾಮಾಜಿಕ, ನಾಗರಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ವಲಯಗಳಲ್ಲಿ ತಳಸಮುದಾಯದ ಹಕ್ಕುಗಳನ್ನು ನಿರಾಕರಿಸಿದ ತಾರತಮ್ಮ ನೀತಿಗಳು ಮತ್ತು ಈ ಜಾತೀಯತೆಯ ಕಾರಣದಿಂದಾಗಿ ಬದುಕು ಕಟ್ಟಿಕೊಳ್ಳಲು ಬೇಕಾದಂತಹ ಆರ್ಥಿಕ ವರಮಾನದ ಕೊರತೆ, ವ್ಯವಸಾಯ, ಭೂಮಿ, ಶಿಕ್ಷಣ, ನೌಕರಿ, ನಾಗರಿಕ ಸೌಲಭ್ಯಗಳಾದ ಮನೆ, ನೀರು, ವಿದ್ಯುತ್ ಮುಂತಾದವುಗಳ ಕನಿಷ್ಠ ಸೌಲಭ್ಯಗಳು ಇಲ್ಲದೇ ಇರುವುದರ ಕುರಿತಾದ ಅಂಕಿಅಂಶಗಳನ್ನಾಧರಿಸಿದ ಪ್ರಾಯೋಗಿಕ ಸಾಕ್ಷಿಯನ್ನು ಒದಗಿಸಲು ಪ್ರಯತ್ನಿಸಲಾಗಿದೆ.
ಸುಖದೇವ್ ಥೋರಟ್ ಅವರ ಪ್ರಬಂಧವನ್ನು ಬಿ. ಶ್ರೀಪಾದ ಅವರು ಅನುವಾದಿಸಿದ್ದಾರೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 52. ಮುಖಬೆಲೆ 40 ರೂ.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News