ಟಿಪ್ಪು ಕೋಮು ಸಾಮರಸ್ಯದ ಸಂಕೇತ: ರಾಹುಲ್ ಗಾಂಧಿ

Update: 2018-03-22 04:30 GMT

ಶೃಂಗೇರಿ, ಮಾ. 22: ಟಿಪ್ಪುಸುಲ್ತಾನ್ ಕರ್ನಾಟಕದಲ್ಲಿ ವಿವಾದಾತ್ಮಕ ಇತಿಹಾಸದ ವ್ಯಕ್ತಿಯಾಗಿರಬಹುದು. ಆದರೆ ಈ ಮುಸ್ಲಿಂ ರಾಜ ಕೋಮು ಸಾಮರಸ್ಯದ ಸಂಕೇತ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 

ರಾಜ್ಯಪ್ರವಾಸದ ವೇಳೆ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ ಸಂದರ್ಭ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

"ಟಿಪ್ಪು ಶೃಂಗೇರಿ ಮಠದ ಬಗ್ಗೆ ಹೊಂದಿದ್ದ ಸಂಪರ್ಕದ ಬಗ್ಗೆ ರಾಹುಲ್ ಕೇಳಿದರು. ಟಿಪ್ಪು ಮಠದ ಸ್ವಾಮೀಜಿಯವರಿಗೆ ಪತ್ರ ಬರೆದ ಬಗ್ಗೆ ಮತ್ತು ದೇಣಿಗೆ ನೀಡಿರುವ ಬಗ್ಗೆ ತಿಳಿಸಿದೆ" ಎಂದು ರಾಹುಲ್ ಜತೆಗಿದ್ದ ಕೆಪಿಸಿಸಿ ವಕ್ತಾರ ಕೆ. ದಿವಾಕರ್ ಹೇಳಿದ್ದಾರೆ.

ಈ ಐತಿಹಾಸಿಕ ಘಟನೆ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಕರ್ನಾಟಕ ಕೋಮು ಸಾಮರಸ್ಯದ ಭೂಮಿಯಾಗಿರುವುದಕ್ಕೆ ಅವರು ಗುಣಗಾನ ಮಾಡಿದರು ಎಂದು ದಿವಾಕರ್ ವಿವರಿಸಿದರು.

ರಾಹುಲ್ ಅವರ ಈ ಹೇಳಿಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಏಕೆಂದರೆ ಈಗಾಗಲೇ ಟಿಪ್ಪು ಜಯಂತಿಗೆ ಕೇಸರಿ ಪಡೆ ವಿರೋಧ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News