ಶಾಸಕ ಝಮೀರ್ ಅಹ್ಮದ್ ಭರ್ಜರಿ ಟೀ ವ್ಯಾಪಾರ

Update: 2018-03-22 15:27 GMT

ಮೈಸೂರು,ಮಾ.22: ಶಾಸಕ ಝಮೀರ್ ಅಹ್ಮದ್ ಟೀ ಮಾರುವ ಮೂಲಕ ಬಂದ ಹಣವನ್ನು ಟೀ ಅಂಗಡಿಯ ವ್ಯಾಪಾರಿಗೆ ನೀಡಿದ ಘಟನೆ ಮೈಸೂರಿನಲ್ಲಿ ನಡೆಯಿತು.

ನಗರದ ಸಯ್ಯಾಜಿ ರಾವ್ ರಸ್ತೆಯಿಂದ ಯೂಸುಫ್ ಚೌಕದವರೆಗೆ ಸಾಡೇ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಗುರುವಾರ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಝಮೀರ್ ಅಹ್ಮದ್ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕ್ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ಟೀ ಮಾರಾಟ ಮಾಡಲು ಮುಂದಾದರು.

ಒಂದು ಟೀ ಬೆಲೆ ಕನಿಷ್ಠ 10 ರಿಂದ 20 ರೂ. ಇರಬಹುದು. ಆದರೆ ಇಂದು ನಗರದಲ್ಲಿ ಒಂದು ಟೀ 100 ರೂ.ನಿಂದ 2000 ಸಾವಿರ ರೂ. ವರೆಗೆ ಮಾರಾಟವಾಯಿತು. ಒಂದು ಟೀಗೆ 2000 ಸಾವಿರ ರೂಪಾಯಿನಾ? ಆ ಟೀಯಲ್ಲಿ ಅಂತಹ ವಿಶೇಷವೇನಿತ್ತು ಎಂದು ಎಲ್ಲರೂ ಹುಬ್ಬೇರಿಸಬಹುದು. ಆದರೆ ಅದೇ ಮಾಮೂಲಿ ಟೀ ಶಾಸಕ ಝಮೀರ್ ಅಹ್ಮದ್ ಮಾರಾಟ ಮಾಡಿದ್ದರಿಂದ ಒಂದು ಟೀ 100 ರೂ. ನಿಂದ 2000 ಸಾವಿರದವರೆಗೆ ಮಾರಾಟವಾಯಿತು.

ಶಾಸಕ ಝಮೀರ್ ಅಹ್ಮದ್ ಟೀ ವ್ಯಾಪಾರ ಮಾಡಲು ಮುಂದಾಗುತ್ತಿದ್ದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಮುಗಿಬಿದ್ದು ಟೀ ಕೊಂಡುಕೊಂಡರು. ಇದರಿಂದ ಶಾಸಕರು 10 ನಿಮಿಷಗಳಲ್ಲಿ ಸುಮಾರು 15 ಸಾವಿರದವರೆಗೆ ಟೀ ವ್ಯಾಪಾರ ಮಾಡಿದರು. ಬಳಿಕ ಆ ದುಡ್ಡಿನಲ್ಲಿ 10 ಸಾವಿರ ರೂ. ನೀಡಿ ತಾವೂ ಒಂದು ಟೀ ಕುಡಿದು ಉಳಿದ ಹಣವನ್ನು ಟೀ ವ್ಯಾಪಾರಿಗೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ವಾಸು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News