ಎಚ್-1ಬಿ ವೀಸಾ: ‘ಪ್ರೀಮಿಯಂ ಪ್ರೊಸೆಸಿಂಗ್’ ಸ್ಥಗಿತ

Update: 2018-03-22 16:13 GMT

ವಾಶಿಂಗ್ಟನ್, ಮಾ. 22: 2019ರ ಎಚ್-1ಬಿ ವೀಸಾಗಳ ‘ಪ್ರೀಮಿಯಂ ಪ್ರೊಸೆಸಿಂಗ್’ (ಉದ್ಯೋಗಾಧಾರಿತ ತ್ವರಿತ ವಿಲೇವಾರಿ ಪ್ರಕ್ರಿಯೆ)ನ್ನು ಅಮೆರಿಕ ಸ್ಥಗಿತಗೊಳಿಸಿದೆ. ಹಾಗಾಗಿ, ಈ ಹಿಂದಿನಂತೆಯೇ, ವೀಸಾ ಅರ್ಜಿಗಳನ್ನು ಇಲೆಕ್ಟ್ರಾನಿಕ್ ಲಾಟರಿ ಮೂಲಕ ಒಟ್ಟಾರೆಯಾಗಿ ಆಯ್ಕೆ ಮಾಡಲಾಗುವುದು.

ಎಚ್-1ಬಿ ವೀಸಾ ಅರ್ಜಿಗಳನ್ನು ಎಪ್ರಿಲ್ 2ರಿಂದ ಸ್ವೀಕರಿಸಲಾಗುವುದು.

ಪ್ರೀಮಿಯಂ ಪ್ರೊಸೆಸಿಂಗ್ ವಿಧಾನವನ್ನು ಕಂಪೆನಿಗಳು ಬಳಸಿಕೊಳ್ಳುತ್ತಿದ್ದವು. ಹೆಚ್ಚು ಶುಲ್ಕ ಪಾವತಿಸಿದರೆ ವೀಸಾ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ವ್ಯವಸ್ಥೆ ಇದಾಗಿತ್ತು.

ಎಚ್-1ಬಿ ವೀಸಾ ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ (ಯುಎಸ್‌ಸಿಐಎಸ್)ಯು ‘ಪ್ರೀಮಿಯಂ ಪ್ರೊಸೆಸಿಂಗ್’ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತಿರುವುದು ಎರಡು ವರ್ಷಗಳಲ್ಲಿ ಇದು ಎರಡನೆ ಬಾರಿಯಾಗಿದೆ.

ಆದರೆ, ಉಳಿದ ಎಚ್-1ಬಿ ವೀಸಾ ಅರ್ಜಿ ಆಯ್ಕೆ ಪ್ರಕ್ರಿಯೆಯನ್ನು ಎಂದಿನಂತೆ ಲಾಟರಿ ಮೂಲಕ ನಡೆಸಲಾಗುವುದು.

‘‘ಲಾಟರಿಯನ್ನು ಹಿಂದಿನ ವರ್ಷಗಳ ಮಾದರಿಯಲ್ಲೇ ನಡೆಸಲಾಗುವುದು’’ ಎಂದು ಯುಎಸ್‌ಸಿಐಎಸ್ ವಕ್ತಾರ ಜೋನ್ ಎಫ್. ಟಾಲ್ಬಟ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News