ಗುಜರಾತ್ ಚುನಾವಣೆ ವೇಳೆ ಸಿಎಯಿಂದ ಸೇವೆ ಪಡೆದ ಕಾಂಗ್ರೆಸ್: ರವಿಶಂಕರ್ ಪ್ರಸಾದ್

Update: 2018-03-22 17:33 GMT

ಹೊಸದಿಲ್ಲಿ, ಮಾ. 21: ಕಾಂಗ್ರೆಸ್ ಪ್ರತಿಪಾದನೆಗೆ ಗುರುವಾರ ಪ್ರತಿದಾಳಿ ಆರಂಭಿಸಿರುವ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್, ಗುಜರಾತ್ ವಿಧಾನ ಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಕೇಂಬ್ರಿಜ್ ಅನಾಲಿಟಿಕಾದ ಸೇವೆ ಪಡೆದುಕೊಂಡಿದೆ ಎಂದಿದ್ದಾರೆ.

ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇರಾಕ್‌ನಲ್ಲಿ 39 ಭಾರತೀಯರು ಹತ್ಯೆಯಾದ ಘಟನೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರಕಾರ ದತ್ತಾಂಶ ಸೋರಿಕೆ ಕಥೆ ಕಟ್ಟಿದೆ ಎಂದಿದ್ದಾರೆ.

ಗುಜರಾತ್ ವಿಧಾನ ಸಭೆ ಸಂದರ್ಭ ರಾಹುಲ್ ಗಾಂಧಿ ಅವರ ಸಾಮಾಜಿಕ ಜಾಲ ತಾಣಗಳಲ್ಲಿನ ಅಭಿಯಾನದ ಉಸ್ತುವಾರಿಯನ್ನು ಕೇಂಬ್ರಿಜ್ ಅನಾಲಿಟಿಕಾ ನೋಡಿಕೊಂಡಿದೆ ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.

ರಾಹುಲ್ ಗಾಂಧಿಗೆ ಕೇಂಬ್ರಿಜ್ ಅನಾಲಿಟಿಕಾದೊಂದಿಗೆ ಸಂಪರ್ಕ ಇರುವುದರ ಬಗ್ಗೆ 5 ತಿಂಗಳ ಹಿಂದೆಯೇ ವರದಿ ಬಂದಿದೆ ಎಂದು ಸಚಿವರು ಆರೋಪಿಸಿದ್ದಾರೆ.

ರವಿಶಂಕರ್ ಪ್ರಸಾದ್ ಅವರ ಆರೋಪವನ್ನು ನಿರಾಕರಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ರವಿಶಂಕರ್ ಪ್ರಸಾದ್ ಅವರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಕೇಂಬ್ರಿಜ್ ಅನಾಲಿಟಿಕಾದೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News