ಬದುಕುವ ಹಕ್ಕೆಂದರೆ, ಪ್ರಾಣಿಗಳಂತೆ ಬದುಕುವ ಹಕ್ಕಲ್ಲ: ಆಧಾರ್ ಸಮರ್ಥಿಸಿಕೊಂಡ ಸರಕಾರ

Update: 2018-03-23 17:24 GMT

ಹೊಸದಿಲ್ಲಿ, ಮಾ. 23: ಭಾರತ ಖಾಸಗಿತನದ ಬಗ್ಗೆ ಕಾಳಜಿ ವಹಿಸುವುದಕ್ಕೆ ಬದಲಾಗಿ ಅಸಂಖ್ಯಾತ ಬಡಜನರಿಗೆ ಆಹಾರವನ್ನು ಸಮಯಕ್ಕೆ ಸರಿಯಾಗಿ ಪೂರೈಸುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಎಂದು ದೇಶದ ಉನ್ನತ ಅಧಿಕಾರಿಯೊಬ್ಬರು ಬಯೋಮೆಟ್ರಿಕ್ ಗುರುತು ಯೋಜನೆಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದಾರೆ.

 ಆಧಾರ್ ಎಂದು ಕರೆಯಲಾಗುವ ಸಮಗ್ರ ಡಿಜಿಟಲ್ ಗುರುತು ಯೋಜನೆ ಆಹಾರ, ಇತರ ಸಬ್ಸಿಡಿಗಳು ಬಡವರಿಗೆ ಲಭ್ಯವಾಗಲು ಹಾಗೂ ಕಲ್ಯಾಣ ನಿಧಿಯ ಯಥೇಚ್ಛ ವಂಚನೆಯನ್ನು ತಡೆಯಲು ನೆರವಾಗಲಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸುಪ್ರೀಂಕೋರ್ಟ್‌ಗೆ ತಿಳಿಸಿದರು.

 ಬದುಕುವ ಹಕ್ಕು ಎಂದರೆ ಕೇವಲ ಪ್ರಾಣಿಗಳಂತೆ ಬದುಕುವ ಹಕ್ಕಲ್ಲ. ಅದು ಆಹಾರ ಹಾಗೂ ಗೌರವದೊಂದಿಗೆ ಬದುಕುವುದು. ಒಂದು ವೇಳೆ ನಿಮಗೆ ಆಹಾರ, ವಸತಿ ಇಲ್ಲಿದಿದ್ದರೆ, ಈ ಜನರ ಖಾಸಗಿತನದ ಬಗೆಗಿನ ಪ್ರಶ್ನೆ ಎಲ್ಲಿರುತ್ತದೆ ಎಂದು ವೇಣುಗೋಪಾಲ್ ಗುರುವಾರ ಸುಪ್ರೀಕೋರ್ಟ್‌ನಲ್ಲಿ ಹೇಳಿದರು.

   ಕಣ್ಣಿನ ಪಾಪೆ, ಬೆರಳಚ್ಚು ಸಂಗ್ರಹ ಹಾಗೂ ಮುಖ ಸ್ಕಾನ್ ಬಳಿಕ ಸುಮಾರು ಒಂದು ಶತಕೋಟಿ ಜನರಿಗೆ ಅನನ್ಯ 12 ಅಂಕೆಗಳ ಸಂಖ್ಯೆ ನೀಡುವ ಆಧಾರ್ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾದ ಕೀಲಿ ಕೈ. ಉಚಿತ ಆಹಾರ ಹಾಗೂ ಸಬ್ಸಿಡಿಯಿದ ಹಿಡಿದು ಬ್ಯಾಂಕ್ ಖಾತೆ ತೆರೆಯುಲು ಹಾಗೂ ಮೊಬೈಲ್ ಫೋನ್ ಬಳಕೆಗೆ ಆಧಾರ ಆಧಾರ್ ಕಾರ್ಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News