ಮೋದಿ ಆ್ಯಪ್ ನಿಂದ ಮಾಹಿತಿ ಸೋರಿಕೆ: ಸಂಶೋಧಕ

Update: 2018-03-24 07:54 GMT

ಹೊಸದಿಲ್ಲಿ, ಮಾ.24:  ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಆ್ಯಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್, ಬಳಕೆದಾರರ ಖಾಸಗಿ ಮಾಹಿತಿಯನ್ನು ಅವರ ಅನುಮತಿ ಪಡೆಯದೆ ಅಮೆರಿಕನ್ ಕಂಪನಿ ಕ್ಲೆವರ್ ಟ್ಯಾಪ್ ಜತೆ ಹಂಚಿಕೊಂಡಿದೆ ಎಂದು ಫ್ರಾನ್ಸ್ ನ ಭದ್ರತಾ ಸಂಶೋಧಕ ಎಲಿಯಟ್ ಆಲ್ಡರ್ಸನ್ ಆರೋಪಿಸಿದ್ದಾರೆ.

ನರೇಂದ್ರ ಮೋದಿ ಆಂಡ್ರಾಯ್ಡ್ ಆ್ಯಪ್‍ನಲ್ಲಿ ಬಳಕೆದಾರರು ಪ್ರೊಫೈಲ್ ಸೃಷ್ಟಿಸಿದಾಗ ಅವರ ಡಿವೈಸ್ ಮಾಹಿತಿ ಮತ್ತು ವೈಯಕ್ತಿಕ ಮಾಹಿತಿಯನ್ನು ಮೂರನೇ ವ್ಯಕ್ತಿಯಾದ in.wzrkt.com ಡೊಮೈನ್ ಗೆ ನೀಡಲಾಗುತ್ತದೆ. ಇದು ಅಮೆರಿಕದ ಕಂಪೆನಿ ಎಂದು ಎಲಿಯಟ್ ಸರಣಿ ಟ್ವೀಟ್‍ನಲ್ಲಿ ಪ್ರತಿಪಾದಿಸಿದ್ದಾರೆ.

ಈ ಸಂಶೋಧಕರ ಪ್ರಕಾರ, ಬಳಕೆದಾರರ ಡಿವೈಸ್ ಮಾಹಿತಿಯಲ್ಲಿ ಆಪರೇಟಿಂಗ್ ಸಾಫ್ಟ್ ವೇರ್, ನೆಟ್‍ವರ್ಕ್, ಕ್ಯಾರಿಯರ್ ಮತ್ತಿತರ ಮಾಹಿತಿಗಳು ರವಾನೆಯಾಗುತ್ತವೆ. ಇದೇ ವೇಳೆ ವೈಯಕ್ತಿಕ ಮಾಹಿತಿಗಳಾದ ಬಳಕೆದಾರರ ಇ-ಮೇಲ್, ಫೋಟೊ ಮತ್ತು ಹೆಸರನ್ನು ಕೂಡಾ ಕ್ಲೆವರ್ ಟ್ಯಾಪ್ ಜತೆಗೆ ಅನುಮತಿ ಇಲ್ಲದೇ ಹಂಚಿಕೊಳ್ಳಲಾಗುತ್ತದೆ ಎಂದು ಎಲಿಯಟ್ ಟ್ವೀಟ್ ಮಾಡಿದ್ದಾರೆ.

ಹೀಗೆ ಮಾಹಿತಿ ರವಾನೆಯಾಗುವ ಡೊಮೈನ್, ಫಿಶಿಂಗ್ ಲಿಂಕ್ ಎಂದು ಜಿ-ಡಾಟಾದಿಂದ ವರ್ಗೀಕೃತವಾಗಿದೆ ಎಂದು ಅವರು ಹೇಳಿದ್ದಾರೆ. Narendramodi.in ವೆಬ್ ಸೈಟ್ ಪ್ರಧಾನಿ ಮೋದಿಯವರ ಹೆಸರಿನಲ್ಲಿ ರಿಜಿಸ್ಟರ್ ಆಗಿದ್ದು, ಹೊಸದಿಲ್ಲಿಯ ಅಕ್ಬರ್ ರಸ್ತೆಯಲ್ಲಿರುವ ಕಚೇರಿಯ ವಿಳಾಸ ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News