ಬ್ರಿಟನ್: ಭಾರತೀಯರನ್ನು ಬಲಿಪಡೆದ ಟ್ರಕ್ ಅಪಘಾತ; ಚಾಲಕರಿಗೆ ಜೈಲುಶಿಕ್ಷೆ

Update: 2018-03-24 11:35 GMT

ಲಂಡನ್,ಮಾ.24: ಎಂಟು ಮಂದಿ ಭಾರತೀಯರನ್ನು ಬಲಿಪಡೆದ ರಸ್ತೆ ಅಪಘಾತದಲ್ಲಿ ಟ್ರಕ್ ಚಾಲಕರಿಗೆ ಜೈಲು ಶಿಕ್ಷೆ ವಿಧಿಸಿ ಬ್ರಿಟನ್‍ನ ನ್ಯಾಯಾಲಯವೊಂದು ತೀರ್ಪು ನೀಡಿದೆ. ಪೊಲೆಂಡಿನ ರಿಝಾರ್ಡ್ ಮಸಿಯೊರಾ(31), ಬ್ರಿಟಿಷ್ ಪ್ರಜೆ ಡೇವಿಡ್ ವಾಗ್‍ಸ್ಟಾಫ್(51)ಜೈಲು ಶಿಕ್ಷೆಗೊಳಗಾದ ಟ್ರಕ್ ಚಾಲಕರು. ಮಸಿಯೊರಾಗೆ 14 ವರ್ಷ, ವಾಗ್‍ಸ್ಟಾಫ್‍ಗೆ ಮೂರುವರ್ಷ ಜೈಲು ಶಿಕ್ಷೆ ತೀರ್ಪು ನೀಡಿದ್ದು,  ಇನ್ನು ಮುಂದೆ  ಇವರಿಬ್ಬರು ವಾಹನ ಚಲಾಯಿಸದಂತೆ ಕೋರ್ಟು ನಿಷೇಧ ಹೇರಿದೆ.

ಕಳೆದ ವರ್ಷ ಆಗಸ್ಟ್ 26ರಂದು ಲಂಡನ್‍ನಲ್ಲಿ ಅಪಘಾತ ನಡೆದಿತ್ತು. ಅಪಘಾತದಲ್ಲಿ ಮಿನಿ ಬಸ್‍ಚಾಲಕರಾದ ಸಿರಿಯಾಕ್ ಜೋಫ್ ಮತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಏಳು ಮಂದಿ ಭಾರತೀಯರು  ಮೃತಪಟ್ಟಿದ್ದರು. ಭಾರತೀಯರು ಪ್ರಯಾಣಿಸುತ್ತಿದ್ದ  ಮಿನಿಬಸ್ ಮುಂಭಾಗದಲ್ಲಿ  ನಿಲ್ಲಿಸಿದ್ದ ಟ್ರಕ್ ಮತ್ತು ಹಿಂದಿನಿಂದ ಬಂದ ಇನ್ನೊಂದು ಟ್ರಕ್‍ನ ಮಧ್ಯೆ ಸಿಲುಕಿ ನುಜ್ಜು ಗುಜ್ಜಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News