ಕಾರು ಅಪಘಾತ: ಮುಹಮ್ಮದ್ ಶಮಿ ತಲೆಗೆ ಗಾಯ

Update: 2018-03-25 07:00 GMT

ಹೊಸದಿಲ್ಲಿ, ಮಾ.25: ಭಾರತ ಕ್ರಿಕೆಟಿಗ ಮುಹಮ್ಮದ್ ಶಮಿ ಡೆಹ್ರಾಡೂನ್‌ನಿಂದ ದಿಲ್ಲಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆಯಿಂದ ಶಮಿ ತಲೆಗೆ ಸ್ವಲ್ಪ ಗಾಯವಾಗಿದೆ.

ರವಿವಾರ ಶಮಿ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್‌ವೊಂದು ಢಿಕ್ಕಿ ಹೊಡೆದಿದೆ. ಶಮಿ ತಲೆಗೆ ಸ್ವಲ್ಪ ಗಾಯವಾಗಿದ್ದು, ಹತ್ತು ಹೊಲಿಗೆಗಳನ್ನು ಹಾಕಲಾಗಿದೆ. ಇದೀಗ ಅವರು ಡೆಹ್ರಾಡೂನ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಶಮಿ ಪತ್ನಿ ಹಸಿನಾ ಜಹಾನ್ ಕೌಟುಂಬಿಕ ಹಿಂಸಾಚಾರ ದೂರು ನೀಡಿದ ಹಿನ್ನೆಲೆಯಲ್ಲಿ ಶಮಿ ವಿರುದ್ಧ ಹತ್ಯೆಗೆ ಯತ್ನ ಸಹಿತ ಹಲವು ಜಾಮೀನುರಹಿತ ಪ್ರಕರಣ ದಾಖಲಾಗಿದೆ. ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಜಹಾನ್ ಹೊರಿಸಿದ್ದರು. ಈ ಆರೋಪದಿಂದ ಶಮಿ ಮುಕ್ತರಾಗಿದ್ದಾರೆ.

ಕಳೆದ 15 ದಿನಗಳಿಂದ ಮಾನಸಿಕ ಹಿಂಸೆ ಅನುಭವಿಸುತ್ತಿರುವ ಶಮಿ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ರತಿನಿಧಿಸಲು ಸಜ್ಜಾಗುತ್ತಿದ್ದಾರೆ. ಮಾನಸಿಕ ಹಾಗೂ ದೈಹಿಕವಾಗಿ ಚೇತರಿಸಿಕೊಳ್ಳಲು ಬಂಗಾಳ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ ತಂದೆ ಅವರ ಡೆಹ್ರಾಡೂನ್‌ನಲ್ಲಿರುವ ಅಭಿಮನ್ಯು ಕ್ರಿಕೆಟ್ ಅಕಾಡಮಿಯಿಂದ ದಿಲ್ಲಿಗೆ ವಾಪಸಾಗುತಿದ್ದ ವೇಳೆ ಈ ಅವಘಡ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News