ಲಾಕ್ ಆದ ಕಾರಿನಲ್ಲಿ ಉಸಿರುಗಟ್ಟಿ ಬಾಲಕ ಮೃತ್ಯು

Update: 2018-03-26 16:04 GMT

ಭೋಪಾಲ, ಮಾ. 26: ಶಾಲೆಯ ನಿರ್ದೇಶಕ ಹಾಗೂ ಶಿಕ್ಷಕರ ನಿರ್ಲಕ್ಷ್ಯದಿಂದ ನಾಲ್ಕು ಗಂಟೆಗಳಿಗೂ ಅಧಿಕ ಕಾಲ ಲಾಕ್ ಆಗಿದ್ದ ಕಾರಿನ ಒಳಗಡೆ ಇದ್ದ 6 ವರ್ಷದ ವಿದ್ಯಾರ್ಥಿ ಉಸಿರಾಡಲು ಸಾಧ್ಯವಾಗದೆ ಮೃತಪಟ್ಟ ಘಟನೆ ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಪೋಷಕರು ಆಗ್ರಹಿಸಿದ್ದಾರೆ.

ಡೋಲಾರಿಯಾ ಪಟ್ಟಣದ ಸಾಯಿ ಇಂಟರ್‌ನ್ಯಾಶನಲ್ ಶಾಲೆಯ ವಿದ್ಯಾರ್ಥಿ ನೈತಿಕ್ ಗೌರ ಮೃತಪಟ್ಟ ವಿದ್ಯಾರ್ಥಿ. ಲಾಕ್ ಆದ ಕಾರಿನಲ್ಲಿ ನಾಲ್ಕು ಗಂಟೆಗಳ ಕಾಲ ಇದ್ದು ಅಸ್ವಸ್ತಗೊಂಡಿದ್ದ ಬಾಲಕನನ್ನು ಮಾರ್ಚ್ 20ರಂದು ಭೋಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಶಾಲೆಯ ಆಡಳಿತ ಮಂಡಳಿ ನನ್ನ ಮಗನನ್ನು ಬಲಿ ತೆಗೆದುಕೊಂಡಿತು. ಅವರ ನಿರ್ಲಕ್ಷ್ಯದಿಂದ ನನ್ನ ಮಗ ನಾಲ್ಕು ಗಂಟೆಗಳ ಕಾಲ ಕಾರಿನಲ್ಲಿ ಇದ್ದ. ಅವರ ನಿರ್ಲಕ್ಷ್ಯ ನನ್ನ ಮಗನನ್ನು ಕೊಂದಿತು’’ ಎಂದು ಬಾಲಕನ ತಂದೆ ಸುರೇಂದ್ರ ಗೌರ್ ಹೇಳಿದ್ದಾರೆ. ಶಾಲೆಯ ನಿರ್ದೇಶಕ ನಿತಿನ್ ಗೌರ್ ತಪ್ಪೊಪ್ಪಿಕೊಂಡಿದ್ದಾರೆ. ‘‘ಸಾಮಾನ್ಯವಾಗಿ ಜವಾನ ಬಾಲಕನನ್ನು ತರಗತಿಗೆ ಕರೆದುಕೊಂಡು ಬರುತ್ತಾನೆ. ಆದರೆ, ಅಂದು ಆತ ಬಾಲಕನನ್ನು ಕಾರಿನಿಂದ ಹೊರಗೆ ಕರೆದುಕೊಂಡು ಬರಲು ಮರೆತಿದ್ದಾನೆ’’ ಎಂದು ಮಾರ್ಚ್ 19ರಂದು ಶಾಲಾ ವಾಹನ ಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಅವರವರ ಮನೆಗೆ ಬಿಟ್ಟು ಬಂದ ಗೌರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News