ಚುನಾವಣಾ ಆಯೋಗಕ್ಕೂ ಮೊದಲು ಕರ್ನಾಟಕ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ

Update: 2018-03-27 08:15 GMT

ಬೆಂಗಳೂರು,ಮಾ.27 : ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸುವ ಮುನ್ನವೇ ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ಐಟಿ ಘಟಕದ ಅಧ್ಯಕ್ಷ ಅಮಿತ್ ಮಾಲವಿಯ ಅವರು ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್ ಹೇಳಿದ್ದಾರೆ.

(ಅಮಿತ್ ಮಾಲವಿಯ)

"ಕರ್ನಾಟಕ ವಿಲ್ ವೋಟ್ ಆನ್ 12 ಮೇ 2018, ಕೌಂಟಿಂಗ್ ಆನ್ 18 ಮೇ 2018,'' ಎಂದು ಮಾಲವಿಯ ಟ್ವೀಟ್ ಮಾಡಿದ್ದರು. ಇದು ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ ಹಾಗೂ ಮತ ಎಣಿಕೆ ದಿನಾಂಕವೂ ತಪ್ಪಾಗಿದೆ ಎಂದು ತಿಳಿಯುತ್ತಲೇ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದರು.

ಈ ಬಗ್ಗೆ ಪತ್ರಕರ್ತರೊಬ್ಬರು ರಾವತ್ ಅವರ ಗಮನ ಸೆಳೆದಾಗ "ನಾವು ದಿನಾಂಕ ಘೋಷಿಸುವ ತನಕ ಕಾಯಿರಿ, ನಂತರ ವಾಸ್ತವಾಂಶ ತಿಳಿಯಿರಿ,'' ಎಂದಿದ್ದಾರೆ. ಮಾಹಿತಿ ಸೋರಿಕೆಯ ಬಗ್ಗೆ ತಮ್ಮ ಕಚೇರಿ  ತನಿಖೆ ನಡೆಸುವುದಾಗಿಯೂ ಅವರು ತಿಳಿಸಿದ್ದಾರಲ್ಲದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News