ಹಾಲಿ ಚಾಂಪಿಯನ್ ಕಾಂಟಾಗೆ ಸೋಲುಣಿಸಿದ ವೀನಸ್

Update: 2018-03-28 18:47 GMT

ಮಿಯಾಮಿ, ಮಾ.27: ಮಿಯಾಮಿ ಓಪನ್ ಚಾಂಪಿಯನ್ ಜೊಹನ್ನಾ ಕಾಂಟಾರನ್ನು ಮಣಿಸಿದ ಏಳು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಸೋಮವಾರ 2 ಗಂಟೆ, 19 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 37ರ ಹರೆಯದ ಅಮೆರಿಕ ಆಟಗಾರ್ತಿ ವೀನಸ್ ಬ್ರಿಟನ್‌ನ ನಂ.1 ಆಟಗಾರ್ತಿ ಕಾಂಟಾರನ್ನು 5-7,6-1, 6-2 ಸೆಟ್‌ಗಳಿಂದ ಸೋಲಿಸಿದ್ದಾರೆ. ವೀನಸ್ ಮುಂದಿನ ಸುತ್ತಿನಲ್ಲಿ ಮೋನಿಕಾ ಅಥವಾ ಅಮೆರಿಕದ ಡೇನಿಯಲ್ ಕಾಲ್ಲಿನ್ಸ್‌ರನ್ನು ಎದುರಿಸಲಿದ್ದಾರೆ.

ಯುಎಸ್ ಓಪನ್ ಚಾಂಪಿಯನ್ ಸ್ಲೊಯಾನೆ ಸ್ಟೇಫನ್ಸ್ ವಿಶ್ವದ ನಂ.3ನೇ ಆಟಗಾರ್ತಿ ಗಾರ್ಬೈನ್ ಮುಗುರುಝರನ್ನು 6-3, 6-4 ನೇರ ಸೆಟ್‌ಗಳಿಂದ ಮಣಿಸಿ ಶಾಕ್ ನೀಡಿದರು.

  ವಿಶ್ವದ ನಂ.12ನೇ ಆಟಗಾರ್ತಿ ಸ್ಟೇಫನ್ಸ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್‌ರನ್ನು ಎದುರಿಸಲಿದ್ದಾರೆ. ಇದೇ ವೇಳೆ, ಮಾಜಿ ನಂ.1 ಆಟಗಾರ್ತಿ ಕೆರ್ಬರ್ ಚೀನಾದ ವಾಂಗ್ ಯಫಾನ್‌ರನ್ನು 6-7(1/7),7-6(7/5), 6-3 ಸೆಟ್‌ಗಳಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News