ರಾಜಸ್ಥಾನ ವಿರುದ್ಧದ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಕನಸು ಜೀವಂತ

Update: 2024-05-08 04:42 GMT

Photo: X/mufaddal_vohra

ಹೊಸದಿಲ್ಲಿ: ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ವೇಗದ ಬೌಲರ್ ಮುಕೇಶ್ ಕುಮಾರ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ, ರಾಜಸ್ಥಾನ ವಿರುದ್ಧ 20 ರನ್ ಗಳ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ 2024ರ ಐಪಿಎಲ್ ನಲ್ಲಿ ಪ್ಲೇಆಫ್ ಕನಸನ್ನು ಜೀವಂತವಿರಿಸಿಕೊಂಡಿದೆ.

ಈ ಇಬ್ಬರು ಬೌಲರ್ ಗಳ ಅದ್ಭುತ ಪ್ರದರ್ಶನ, ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ವೀರೋಚಿತ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. 4 ಓವರ್ ಗಳಲ್ಲಿ 25 ರನ್ ನೀಡಿ ಎರಡು ಪ್ರಮುಖ ವಿಕೆಟ್ಗಳನ್ನು ಕುಲದೀಪ್ ಕಬಳಿಸಿದರು. ಡೊನೊವನ್ ಫೆರೇರಾ ಅವರನ್ನು ಎಲ್ ಬಿಡಬ್ಲ್ಯು ಬಲೆಗೆ ಬೀಳಿಸಿದರೆ, ಅಂತಿಮ ಓವರ್ ನಲ್ಲಿ ರವಿಚಂದ್ರನ್ ಅಶ್ವಿನ್ ಲಾಂಗ್ ಆನ್ ನಲ್ಲಿ ಕ್ಯಾಚ್ ಕೊಟ್ಟು ಕುಲದೀಪ್ ಗೆ ವಿಕೆಟ್ ಒಪ್ಪಿಸಿದರು.

ನಿಧಾನಗತಿಯ ಬೌಲಿಂಗ್ ನಿಂದಾಗಿ ಕೊನೆಯ ಓವರ್ ನಲ್ಲಿ ಕೇವಲ ನಾಲ್ವರು ಆಟಗಾರರು 30 ಯಾರ್ಡ್ ಸರ್ಕಲ್ ನ ಹೊರಗಿದ್ದರೂ, ಮುಕೇಶ್, ರೊವನ್ ಪೊವೆಲ್ ಅವರನ್ನು ಮುಕೇಶ್ ಕುಮಾರ್ ಪೆವಿಲಿಯನ್ ಗೆ ಕಳುಹಿಸುವ ಮೂಲಕ ನಿರ್ಣಾಯಕ ಓವರ್ ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಕುಲದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಮೊದಲು ಬ್ಯಾಟ್ ಮಾಡಿದ ಡಿಸಿ 221 ರನ್ ಗಳ ಬೃಹತ್ ಮೊತ್ತ ಪೇರಿಸಿದರೆ ರಾಜಸ್ಥಾನ ರಾಯಲ್ಸ್ 201 ರನ್ ಗಳಿಗೆ ಇನಿಂಗ್ಸ್ ಕೊನೆಗೊಳಿಸಿತು. ರಾಜಸ್ಥಾನದ ಪರ ಸಂಜು ಸ್ಯಾಮ್ಸನ್ (46 ಎಸೆತಗಳಲ್ಲಿ 86) ಏಕಾಂಗಿ ಹೋರಾಟ ನಡೆಸಿದರು.

"ಉತ್ತಮ ಲೆಂತ್ ನೊಂದಿಗೆ ಬೌಲಿಂಗ್ ಮಾಡುವುದು ಪ್ರಮುಖವಾಗಿತ್ತು. ಕೊನೆಯ ಓವರ್ ಗಳ ಬೌಲಿಂಗ್ ನನಗೆ ದೊಡ್ಡ ಸವಾಲಾಗಿತ್ತು. ಫೆರೇರಾ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಆಡಿದ್ದೆ ಹಾಗೂ ಅವರು ಬ್ಯಾಕ್ ಫೂಟ್ ಆಟಗಾರ ಎನ್ನುವುದು ತಿಳಿದಿತ್ತು. ಫುಲ್ ಮತ್ತು ವೇಗದ ಎಸೆತದ ಮೂಲಕ ಮೊದಲ ಬಾಲ್ ನಲ್ಲೇ ಅವರನ್ನು ಔಟ್ ಮಾಡಲು ಸಾಧ್ಯವಾಯಿತು" ಎಂದು ಕುಲದೀಪ್ ಬಹುಮಾನ ವಿತರಣಾ ಸಮಾರಂಭದಲ್ಲಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News