ಟಿ20 ವಿಶ್ವಕಪ್ ಗಿಂತ ಮೊದಲು ರೋಹಿತ್ ಶರ್ಮಾಗೆ ವಿರಾಮದ ಅಗತ್ಯವಿದೆ : ಮೈಕಲ್ ಕ್ಲಾರ್ಕ್

Update: 2024-05-07 16:28 GMT

ರೋಹಿತ್ ಶರ್ಮಾ | PC : PTI 

ಮುಂಬೈ: ರೋಹಿತ್ ಶರ್ಮಾ ದಣಿದಿದ್ದು, ಟಿ20 ವಿಶ್ವಕಪ್ ಗೆ ಮೊದಲು ಫ್ರೆಶ್ ಆಗಿರಲು ಅವರಿಗೆ ಕ್ರಿಕೆಟ್ನಿಂದ ವಿರಾಮದ ಅಗತ್ಯವಿದೆ ಎಂದು ಆಸ್ಟ್ರೇಲಿಯ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲಿರುವ 37 ವರ್ಷ ವಯಸ್ಸಿನ ರೋಹಿತ್, ಐಪಿಎಲ್ ಲ್ಲಿ ಮುಂಬೈ ಇಂಡಿಯನ್ಸ್ ಪರ ಕಳೆದ 5 ಇನಿಂಗ್ಸ್ಗಳಲ್ಲಿ ನಾಲ್ಕರಲ್ಲಿ ಒಂದು ಅಂಕಿ ಮೊತ್ತಕ್ಕೆ ನಿರ್ಗಮಿಸಿದ್ದಾರೆ.

ರೋಹಿತ್ ತಮ್ಮ ಪ್ರದರ್ಶನದ ಬಗ್ಗೆ ಸ್ವವಿಮರ್ಶೆ ಮಾಡಬಲ್ಲರು. ಲೀಗ್ನಲ್ಲಿ ಉತ್ತಮ ಆರಂಭ ಮಾಡಿದ್ದ ಅವರಿಗೆ ಈಗ ನಿರಾಶೆಯಾಗುವುದರಲ್ಲಿ ಅನುಮಾನವಿಲ್ಲ. ಅವರಿಗೆ ಸುಸ್ತಾಗಿರುವ ಸಾಧ್ಯತೆಯೂ ಇದೆ. ಸ್ವಲ್ಪ ವಿರಾಮ ಪಡೆದರೆ ಅದು ಅದ್ಭುತ ಪರಿಣಾಮಬೀರುತ್ತದೆ. ಭಾರತ ಕ್ರಿಕೆಟ್ ತಂಡದ ನಾಯನಾಗಿದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ರಮುಖ ಆಟಗಾರನಾಗಿ ವಿರಾಮ ಸಿಗುವುದು ಕಷ್ಟ. ಆದರೆ ಅವರು ಲಯ ಕಂಡುಕೊಳ್ಳಬೇಕಾಗಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News