ನಾಯಿಗಳಿಗೆ ಪ್ಲಾಸ್ಟಿಕ್ ಸರ್ಜರಿ ನಿಷೇಧಿಸಲು 'ಪೆಟಾ' ಆಗ್ರಹ

Update: 2018-03-31 18:46 GMT

  ಹೊಸದಿಲ್ಲಿ, ಮಾ.31: ನಾಯಿಗಳ ಬಾಲ ಟ್ರಿಮ್ ಮಾಡುವ, ಕಿವಿ ಕತ್ತರಿಸುವ ಮೂಲಕ ಪ್ಲಾಸ್ಟಿಕ್ ಸರ್ಜರಿ ನಡೆಸುವುದನ್ನು ಪಶುಚಿಕಿತ್ಸೆ ನಿಯಂತ್ರಕ ಸಂಸ್ಥೆಗಳು ನಿಷೇಧಿಸಬೇಕು ಎಂದು ಪ್ರಾಣಿಗಳ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ 'ಪೆಟಾ' ಸಂಘಟನೆ ಆಗ್ರಹಿಸಿದೆ.

ಕೆಲವು ತಳಿಗಳ ನಾಯಿಗಳು ವಿಶೇಷವಾಗಿ ಕಾಣಬೇಕೆಂಬ ಉದ್ದೇಶದಿಂದ ಬಾಲ ಟ್ರಿಮ್ ಮಾಡುವುದು, ಕಿವಿ ಕತ್ತರಿಸುವುದು ಇತ್ಯಾದಿ ಕ್ರಿಯೆಗಳನ್ನು ನಡೆಸಲಾಗುತ್ತದೆ . ಇಂತಹ ಪ್ರಕ್ರಿಯೆಗಳಿಗೆ ಪ್ರಾಣಿ ಹಿಂಸೆ ತಡೆ ನಿಯಮ, 2017ರ ಅಡಿ ನಿಷೇಧ ಜಾರಿಗೊಳಿಸಬೇಕು ಎಂದು ಭಾರತೀಯ ಪಶುಚಿಕಿತ್ಸಕ ಸಮಿತಿ (ವಿಸಿಐ)ಗೆ ಕಳೆದ ವಾರ ಬರೆದಿರುವ ಪತ್ರದಲ್ಲಿ 'ಪೆಟ'ದ ಭಾರತೀಯ ಘಟಕ ಒತ್ತಾಯಿಸಿದೆ. ಅಲ್ಲದೆ ಈ ಪತ್ರದ ಪ್ರತಿಗಳನ್ನು ಕೇಂದ್ರ ಹಾಗೂ ರಾಜ್ಯ ಪಶುಸಂಗೋಪನೆ ಇಲಾಖೆಗಳು, ಪಶುವೈದ್ಯಕೀಯ ಕಾಲೇಜುಗಳು ಹಾಗೂ ಪಶುವೈದ್ಯರ ಸಂಘಟನೆಗಳಿಗೆ ಕಳುಹಿಸಲಾಗಿದೆ. ಸಾಮಾನ್ಯವಾಗಿ ನಾಯಿಮರಿಗಳಿಗೆ 2 ತಿಂಗಳಾಗುವಾಗಲೇ ಕಿವಿಗಳನ್ನು ಕತ್ತರಿಸಲಾಗುತ್ತದೆ. ಇದರಿಂದ ನಾಯಿಮರಿಗಳು ತೀವ್ರ ಯಾತನೆಯನ್ನು ಅನುಭವಿಸುತ್ತವೆ ಎಂದು 'ಪೆಟ' ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News